ಬೆಳಗಾವಿ : ಅಧಿವೇಶನದಲ್ಲಿ ಇಂದು ಗೃಹಲಕ್ಷ್ಮೀ ಹಣದ ವಿಚಾರ ಜೋರಾಗಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ಸುಳ್ಳು ಮಾಹಿತಿ ಕೊಟ್ಟಿದ್ದಾರೆ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
3 ದಿನಗಳಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾಣೆಯಾಗಿದ್ದಾರೆ. ಫೆಬ್ರವರಿ, ಮಾರ್ಚ್ ತಿಂಗಳ ಗೃಹ ಲಕ್ಷ್ಮೀ ಹಣ ಎಲ್ಲಿ ಹೋಯ್ತು, ಲಕ್ಷ್ಮಿ ಹೆಬ್ಬಾಳ್ಕರ್ ಕರೆಸಿ ಉತ್ತರ ಕೊಡಿಸುವಂತೆ ಬಿಜೆಪಿ ಸದಸ್ಯರ ಪಟ್ಟು ಹಿಡಿದಿದ್ದಾರೆ. ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಹೆಬ್ಬಾಳ್ಕರ್ ಸ್ಪಷ್ಟ ಉತ್ತರ ಕೊಟ್ಟಿಲ್ಲ, ಸಚಿವೆಯನ್ನು ಕರೆಸಿ ಉತ್ತರ ಕೊಡಿಸಿ ಎಂದು ಬಿಜೆಪಿ ನಾಯಕರು ಸ್ಫೀಕರ್ ಖಾದರ್ಗೆ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ 1.25 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳಿದ್ದಾರೆ, ಕೋಟಿ ಕೋಟಿ ಜನರು ಸರ್ಕಾರದ ಹಣಕ್ಕಾಗಿ ಕಾಯುತ್ತಿದ್ದಾರೆ. ಕಳೆದ 3 ದಿನಗಳಿಂದಲೂ ಸಚಿವೆ ಹೆಬ್ಬಾಳ್ಕರ್ ಸದನಕ್ಕೆ ಬಂದಿಲ್ಲ, 5 ಸಾವಿರ ಕೋಟಿಯ ವಿಚಾರ, ಪ್ರತಿ ತಿಂಗಳು 2,480 ಕೋಟಿ ಕೊಡ್ಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ : ಕಮಲ್ ರಾಜ್ ರಚನೆಯ ಪಂಚ ಕೃತಿ ಲೋಕಾರ್ಪಣೆ!







