ಆರ್​​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್​​​​​​ ಪಂದ್ಯದ ವೇಳೆ ಬಾಲ್ ಟು ಬಾಲ್ ಬೆಟ್ಟಿಂಗ್ – 85 ಲಕ್ಷ ಹಣ ಸೀಜ್..​​​ ಮೂವರ ಬಂಧನ!

ಬೆಂಗಳೂರು : ಪ್ರತ್ಯೇಕ ಪ್ರಕರಣಗಳಲ್ಲಿ ಐಪಿಎಲ್ ಪಂದ್ಯಗಳ​ ಮೇಲೆ​​ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಧೃವ್​​​​ ಮಿತ್ತಲ್​​​, ರೋಹಿತ್​​​​​ ರಂಜನ್​​​ ಹಾಗೂ ವಿಜಯ್​​​​ ಕುಮಾರ್​​​​ ಬಂಧಿತರು.

ಆರೋಪಿಗಳಿಂದ ನಗದು, ಬೆಟ್ಟಿಂಗ್​ ಟೋಕನ್ಸ್​​​ ಸೇರಿದಂತೆ ಒಟ್ಟು 85 ಲಕ್ಷ‌ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್​ 10ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಮೇಲೆ ಆರೋಪಿಗಳು ಬೆಟ್ಟಿಂಗ್‌ನಲ್ಲಿ ತೊಡಗಿದ್ದರು.

ಆರೋಪಿ ಧೃವ್​​ ಮಿತ್ತಲ್​ ಆನ್‌ಲೈನ್​ ಬೆಟ್ಟಿಂಗ್​ ಆಡಿಸುತ್ತಿದ್ದ. ಆತನಿಂದ 2 ಮೊಬೈಲ್​ ಫೋನ್​ಗಳು, ಗೇಮಿಂಗ್​ ಆ್ಯಪ್‌ನಲ್ಲಿದ್ದ ಸುಮಾರು 63 ಲಕ್ಷ ರೂ. ಟೋಕನ್ಸ್​​​​, ಖಾತೆಯಲ್ಲಿದ್ದ 13 ಲಕ್ಷ ಹಣ ಸೇರಿದಂತೆ 75 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇನ್ನೊಂದೆಡೆ, ಆನ್‌ಲೈನ್‌ನಲ್ಲಿ ಬೆಟ್ಟಿಂಗ್‌ ನಡೆಸುತ್ತಿದ್ದ ಜಕ್ಕೂರಿನ ವಿಜಯ್ ಕುಮಾರ್ ಎಂಬಾತನನ್ನು ಬಂಧಿಸಿ 10 ಲಕ್ಷ ರೂ ಜಪ್ತಿ ಮಾಡಲಾಗಿದೆ.

ಬಾಲ್ ಟು ಬಾಲ್ ಬೆಟ್ಟಿಂಗ್ : ಪಂದ್ಯದ ಸಂದರ್ಭದಲ್ಲಿ ಮೈದಾನದಲ್ಲಿ ಕುಳಿತು ಬಾಲ್​ ಟು ಬಾಲ್​ ಮಾಹಿತಿಯನ್ನು ಪಂಟರ್‌ಗಳಿಗೆ ರವಾನಿಸುತ್ತಿದ್ದ ರೋಹಿತ್​ ರಂಜನ್​ ಎಂಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಾಮಾನ್ಯವಾಗಿ ಮೈದಾನದಲ್ಲಿನ ಲೈವ್​ ಪಂದ್ಯಕ್ಕೂ ಹಾಗೂ ನೇರಪ್ರಸಾರಕ್ಕೂ 40-50 ಸೆಕೆಂಡ್‌ಗಳ ಅಂತರವಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಆರೋಪಿಗಳು ಬಾಲ್ ಟು ಬಾಲ್ ಬೆಟ್ಟಿಂಗ್ ಮಾಡಿಸಿ ಹಣ ಗಳಿಸುತ್ತಿದ್ದರು. ಆರೋಪಿ ರೋಹಿತ್ ರಂಜನ್ ಮೈದಾನದಲ್ಲಿ ಕುಳಿತು ಬೆಟ್ಟಿಂಗ್ ಆಡಿಸುವ ಪಂಟರ್‌ಗಳಿಗೆ ಮಾಹಿತಿ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್‌ವುಡ್‌ನಲ್ಲಿ ‘ವಾಮನ’ ಸಿನಿಮಾ ಆರ್ಭಟ – ಧನ್ವೀರ್ ನಟನೆ​ಗೆ ಪ್ರೇಕ್ಷಕರ ಬಹು ಪರಾಕ್.. ಗಲ್ಲಾ ಪೆಟ್ಟಿಗೆಯಲ್ಲಿ ಸಖತ್ ಸದ್ದು!

 

Btv Kannada
Author: Btv Kannada

Read More