ಹೊಸ ಪಾರ್ಕಿಂಗ್ ಜಾಗದಲ್ಲಿ ರಾತ್ರೋರಾತ್ರಿ ಕಮರ್ಷಿಯಲ್ ಕಟ್ಟಡ ನಿರ್ಮಾಣ? – ಬಿಜೆಪಿ ಮುಖಂಡ NR ರಮೇಶ್ ಕ್ರಮಕ್ಕೆ ಆಗ್ರಹ!

ಬೆಂಗಳೂರು : ಹೊಸ ಪಾರ್ಕಿಂಗ್ ಜಾಗದಲ್ಲಿ ರಾತ್ರೋರಾತ್ರಿ ಕಮರ್ಷಿಯಲ್ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಗರದ ಅತ್ಯಧಿಕ ಸಂಚಾರ ದಟ್ಟಣೆಯ ಪ್ರದೇಶವಾದ ಗಾಂಧಿಬಜಾರ್‌ನಲ್ಲಿ ಟ್ರಾಫಿಕ್ ನಿಯಂತ್ರಣಕ್ಕಾಗಿ ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಹುಮಹಡಿ ಕಾರ್ ಪಾರ್ಕಿಂಗ್ ಯೋಜನೆ, ಉದ್ಘಾಟನೆಗೂ ಮುನ್ನವೇ ವಿವಾದಕ್ಕೆ ಸಿಲುಕಿದೆ.

ಗಾಂಧಿಬಜಾರ್‌ನ ತೀವ್ರ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು, ಹಳೆಯ ಪಾಲಿಕೆಯ ಕಟ್ಟಡ ತೆರವುಗೊಳಿಸಿ ಹೊಸ ಪಾರ್ಕಿಂಗ್ ಲಾಟ್ ನಿರ್ಮಿಸಲಾಗಿತ್ತು. ಆದರೆ, ಈ ಪಾರ್ಕಿಂಗ್ ಪ್ರದೇಶದ ಒಂದು ಭಾಗವನ್ನು ರಾತ್ರೋರಾತ್ರಿ ಖಾಸಗಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ. ಪಾರ್ಕಿಂಗ್ ಲಾಟ್‌ನ ಆವರಣದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣವಾಗಿರುವುದು ಬೆಳಕಿಗೆ ಬಂದಿದ್ದು, ಉದ್ಘಾಟನೆಗೂ ಮುನ್ನವೇ ಕಮರ್ಷಿಯಲ್ ಮಳಿಗೆಗಳನ್ನು ನಿರ್ಮಿಸಲು ಖಾಸಗಿಯವರಿಗೆ ಜಾಗ ಹಂಚಿಕೆ ಮಾಡಲಾಗಿದೆ.

ಸ್ಥಳೀಯ ಎಂಜಿನಿಯರ್‌ಗಳು ಭಾರಿ ಕಿಕ್ ಬ್ಯಾಕ್ ಪಡೆದು, ಕಾನೂನು ಬಾಹಿರವಾಗಿ ಮಳಿಗೆಗಳನ್ನು ಕಟ್ಟಲು ಖಾಸಗಿಯವರಿಗೆ ಜಾಗ ಮಂಜೂರು ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಬಹುನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ ಟ್ರೇಲರ್​ಗೆ ಭಾರೀ ಮೆಚ್ಚುಗೆ – ಡಿ.25ಕ್ಕೆ ಸಿನಿಮಾ ರಿಲೀಸ್!

Btv Kannada
Author: Btv Kannada

Read More