ಬೆಂಗಳೂರು : ಕನ್ನಡದ ನಿರ್ಮಾಪಕ ಹರ್ಷವರ್ಧನ್ ಮಗಳಿಗಾಗಿ ತನ್ನ ಪತ್ನಿಯನ್ನೇ ಕಿಡ್ನ್ಯಾಪ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪತ್ನಿಯನ್ನು ಅಪಹರಿಸಿ ನಿನ್ನ ಮಗಳು ಬೇಕು ಅಂದ್ರೆ ನನ್ನ ಮಗಳನ್ನು ಕೊಡು ಎಂದು ನಿರ್ಮಾಪಕ ಹರ್ಷವರ್ಧನ್ ಅತ್ತೆಗೆ ಬೆದರಿಕೆ ಹಾಕಿದ್ದಾನೆ.

ಚೈತ್ರಾ ಎಂಬ ಸೀರಿಯಲ್ ನಟಿಯನ್ನು ವರ್ಧನ್ ಸಿನಿಮಾಸ್ ಕಂಪನಿಯ ನಿರ್ಮಾಪಕ ಹರ್ಷವರ್ಧನ್ ಕಿಡ್ನ್ಯಾಪ್ ಮಾಡಿದ್ದು, ಚೈತ್ರಾ ಕೆಲ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಇಬ್ಬರೂ ಸೇರಿ ‘ನಿನ್ನಲೇನೋ ಹೇಳಬೇಕು’ ಅನ್ನೋ ಸಿನಿಮಾ ಕೂಡ ಮಾಡಿದ್ರು, 2023ರಲ್ಲಿ ಚೈತ್ರಾ-ಹರ್ಷವರ್ಧನ್ ಪರಸ್ಪರ ಒಪ್ಪಿ ಮದುವೆಯಾಗಿದ್ದರು.

ನಟಿ ಚೈತ್ರಾ ಹಾಗೂ ಹರ್ಷವರ್ಧನ್ಗೂ 1 ವರ್ಷದ ಮಗು ಇತ್ತು. ನಂತರ ಇಬ್ಬರ ಮದ್ಯೆ ಜಗಳವಾಗಿ ಇಬ್ಬರೂ ಪ್ರತ್ಯೇಕವಾಗಿ ವಾಸ ಇದ್ರು, ಜಗಳದ ನಂತರ ನಟಿ ಚೈತ್ರಾ ಮಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದರು. ಪ್ರೀತಿಯ ಮಗಳನ್ನು ಬಿಟ್ಟಿರಲು ಆಗದೇ ಹರ್ಷವರ್ಧನ್ ಒದ್ದಾಡಿದ್ದು, ಮಗಳನ್ನು ಕರೆಸಿಕೊಳ್ಳೋಕೆ ಪತ್ನಿ ಚೈತ್ರಾಳನ್ನು ಪ್ರೊಡ್ಯೂಸರ್ ಕಿಡ್ನ್ಯಾಪ್ ಮಾಡಿದ್ದಾನೆ.

ಸ್ನೇಹಿತ ಕೌಶಿಕ್ ಎಂಬಾತನ ಮೂಲಕ ಸೀರಿಯಲ್ ಶೂಟಿಂಗ್ ಎಂದು ನಟಿಯನ್ನು ಕಾಂಟ್ಯಾಕ್ಟ್ ಮಾಡಿ, 20 ಸಾವಿರ ಅಡ್ವಾನ್ಸ್ ಕೊಟ್ಟು ಕರೆಸಿದ್ದರು. ಕೌಶಿಕ್ & ಹರ್ಷವರ್ಧನ್ ಮೈಸೂರಿನಲ್ಲಿ ಶೂಟಿಂಗ್ ಎಂದು ಕರೆಸಿ ನಟಿ ಚೈತ್ರಾಳನ್ನು ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ಅತ್ತೆಗೆ ಕರೆ ಮಾಡಿ ನಿನ್ನ ಮಗಳು ಸೇಫಾಗಿ ಬೇಕು ಅಂದ್ರೆ ನನ್ನ ಮಗಳು ಕೊಡಿ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಸದ್ಯ ಘಟನೆ ಸಂಬಂಧ ಚೈತ್ರಾ ಸಹೋದರಿ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದು, ಹರ್ಷವರ್ಧನ್, ಕೌಶಿಕ್ ಸೇರಿ ಮೂವರ ವಿರುದ್ಧ BNS 140 (3), 61(1), 3(5) ಸೆಕ್ಷನ್ ಅಡಿ FIR ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಇದನ್ನೂ ಓದಿ : ನ್ಯಾಷನಲ್ ಹೆರಾಲ್ಡ್ ಕೇಸ್ – ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್!







