ಪರಪ್ಪನ ಅಗ್ರಹಾರಕ್ಕೆ ನೂತನ DGP ಅಲೋಕ್ ಕುಮಾರ್ ಭೇಟಿ – ಅಧಿಕಾರಿಗಳಿಗೆ ಖಡಕ್ ಕ್ಲಾಸ್!

ಬೆಂಗಳೂರು : ಕೈದಿಗಳಿಗೆ ರಾಜಾತಿಥ್ಯ ನೀಡುವ ವಿಚಾರವಾಗಿ ರಾಜ್ಯದಲ್ಲಿ ಸುದ್ದಿಯಲ್ಲಿರೋ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ನೂತನ DGP ಅಲೋಕ್ ಕುಮಾರ್ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮೊದಲ ಭೇಟಿಯಲ್ಲೇ ಡಿಜಿಪಿ ಅಲೋಕ್ ಕುಮಾರ್ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೈಲಿನ ಆವರಣದಲ್ಲಿನ ಪಾರ್ಕಿಂಗ್ ವಿಚಾರವಾಗಿಯೂ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡು ಇನ್ನು ಮುಂದೆ ಯಾವುದೇ ಕಳ್ಳಾಟ ನಡೆದರೆ ಕಠಿಣ ಕ್ರಮ ಎದುರಿಸಲು ಸಿದ್ಧರಾಗಿರಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇನ್ಮುಂದೆ ಜೈಲಿನೊಳಗೆ ಗಾಂಜಾ, ಬೀಡಿ, ಸಿಗರೇಟ್ ಸಿಗುವುದಿಲ್ಲ. ಎಲ್ಲಾ ವ್ಯವಹಾರಗಳು ಸಂಪೂರ್ಣವಾಗಿ ನಿಲ್ಲಬೇಕು. ಒಂದು ವೇಳೆ ಮೊಬೈಲ್ ಅಥವಾ ಗಾಂಜಾ ಸಾಗಾಣೆ ಮಾಡಿದರೆ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಅಲೋಕ್ ಕುಮಾರ್ ವಾರ್ನಿಂಗ್ ಕೊಟ್ಟಿದ್ದಾರೆ.

ಡಿಜಿಪಿ ಅವರು ಜೈಲಿನ ಹೊರಾಂಗಣದಿಂದ ಹಿಡಿದು ಪ್ರತಿ ಬ್ಯಾರಕ್‌ಗಳು, ಅಡುಗೆ ಮನೆ, ಆಸ್ಪತ್ರೆ ಹಾಗೂ ಬೇಕರಿಗಳಿಗೂ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅವರು ಸುಮಾರು 50ಕ್ಕೂ ಹೆಚ್ಚು ಅಧಿಕಾರಿಗಳ ಜೊತೆ ಜೈಲು ರೌಂಡ್ಸ್ ನಡೆಸಿದರು. ಈ ಸಂದರ್ಭದಲ್ಲಿ ಐಜಿಪಿ ದಿವ್ಯಾ, ಡಿಸಿಪಿ ನಾರಾಯಣ, ಮುಖ್ಯ ಅಧೀಕ್ಷಕ ಅಂಶುಕುಮಾರ್ ಸೇರಿ ಹಲವು ಅಧಿಕಾರಿಗಳು ಸಾಥ್ ನೀಡಿದರು.

ಇದನ್ನೂ ಓದಿ : ರಸ್ತೆ ದಾಟುವಾಗ ಟ್ರ್ಯಾಕ್ಟರ್ ಡಿಕ್ಕಿ – ನಿವೃತ್ತ ವಾರ್ಡನ್ ಸ್ಥಳದಲ್ಲೇ ಸಾವು!

Btv Kannada
Author: Btv Kannada

Read More