ರಸ್ತೆ ದಾಟುವಾಗ ಟ್ರ್ಯಾಕ್ಟರ್ ಡಿಕ್ಕಿ – ನಿವೃತ್ತ ವಾರ್ಡನ್ ಸ್ಥಳದಲ್ಲೇ ಸಾವು!

ಕಲಬುರಗಿ : ರಸ್ತೆ ದಾಟುವಾಗ ಟ್ರ್ಯಾಕ್ಟರ್ ಡಿಕ್ಕಿಯಾಗಿ ನಿವೃತ್ತ ವಾರ್ಡನ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ. ನಬೀಸಾಬ್ ನಾಯ್ಕೋಡಿ ಮೃತ ದುರ್ದೈವಿ.

ನಬೀಸಾಬ್ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಾರ್ಡನ್ ಆಗಿ ನಿವೃತ್ತರಾಗಿದ್ದರು. ಜೇವರ್ಗಿಯ ಬಸವೇಶ್ವರ ವೃತ್ತದ ಬಳಿ ರಸ್ತೆ ದಾಟುವಾಗ ಟ್ರ್ಯಾಕ್ಟರ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವಂಚನೆ – ಮನೆ-ಮಠವನ್ನೇ ಮಾರಿ ವಂಚಕರಿಗೆ 2 ಕೋಟಿ ಕೊಟ್ಟ ಮಹಿಳೆ.. ಕೇಸ್ ದಾಖಲು!

Btv Kannada
Author: Btv Kannada

Read More