ಬೆಂಗಳೂರಿನಲ್ಲಿ ಹಾವಳಿ ಇಡ್ತವ್ರೆ ಕೇರಳಾ ಪೆಡ್ಲರ್ಸ್ – ಪ್ಲಂಬಿಂಗ್ ಕೆಲ್ಸಾ ಬಿಟ್ಟಾ ಬಂಗಿ ನೆಟ್ಟ!

ಬೆಂಗಳೂರು : ನೈಜೀರಿಯನ್ಸ್ ಬಿಟ್ರೆ ಇಡೀ ಕರ್ನಾಟಕಕ್ಕೆ ಮಾದಕ ವಸ್ತು ಸಪ್ಲೈ ಮಾಡೋ ಮತ್ತೋಂದು ಟೀಂ ಕೇರಳದ ಟೀಂ ಅಂದ್ರೆ ತಪ್ಪಾಗಲಾರದು. ಅದರಲ್ಲೂ ಬೆಂಗಳೂರಲ್ಲಿ ತಗಲ್ಲಾಕ್ಕೊಳ್ಳೋ NDPS ಕೇಸ್ ಗಳಲ್ಲಿ ಕೇರಳದವ್ರ ಹೆಸರೇ ಪ್ರಮುಖವಾಗಿ ಕಾಣಿಸಿಕೊಳ್ಳುತ್ತೆ. ಇಂದೂ ಕೂಡ ಕೇರಳದ ಪ್ಲಂಬರ್ ಒಬ್ಬನನ್ನ ಬೆಂಗಳೂರು ದಂಡು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಕಾರಣ ಪ್ಲಂಬಿಂಗ್ ಕೆಲ್ಸ ಮಾಡ್ದಾ ಅಂತ ಅಲ್ಲ, ಗಾಂಜಾ ಹಿಡಿದು ಸೈಲೆಂಟಾಗಿ ಬೆಂಗಳೂರಿಗೆ ಬಂದಾ ಅಂತ. ಹೌದು, ಕೇರಳದ ಗಣೇಶ ತನ್ನ ಊರಲ್ಲಿ ಪ್ಲಂಬಿಂಗ್ ಕೆಲಸ ಮಾಡಿಕೊಂಡಿದ್ದ. ಡೈಲಿ ಶೋಕಿ ಲೈಫು ಪ್ಲಂಬಿಂಗ್ ಕೆಲಸವನ್ನ ಬಿಡೋವಂತೆ ಮಾಡ್ತು. ಅದಕ್ಕಾಗಿ ಈಜಿ ಮನಿ ಮಾಡೋಣ ಅಂತ ಗಣೇಶ ಬ್ಯಾಗಿಡ್ದು ಒರಿಸ್ಸಾ ಟ್ರೈನ್ ಏರಿದ್ದ.

ಒರಿಸ್ಸಾದಿಂದ ಆರು ಕೆಜಿ ಗಾಂಜಾವನ್ನ ಖರೀದಿ ಮಾಡಿ ಪ್ರಶಾಂತಿ ಎಕ್ಸ್ ಪ್ರೆಸ್ ರೈಲೇರಿದ್ದ. ಹೀಗೆ ಪ್ರಶಾಂತಿ ಎಕ್ಸ್ ಪ್ರೆಸ್ ಟ್ರೈನ್ ಬೆಂಗಳೂರಿನ ದಂಡು ರೈಲ್ವೇ ನಿಲ್ದಾಣಕ್ಕೆ ಬರ್ತಿದ್ದಂತೆ ರೈಲ್ವೇ ಪೊಲೀಸರು ಅನುಮಾನಗೊಂಡು ಗಣೇಶನ ಬ್ಯಾಗ್ ಚೆಕ್ ಮಾಡಿದ್ದಾರೆ. ನಂತರ ಗೊತ್ತಲ್ಲ, ಗಣೇಶನಿಗೆ ಪೂಜೆ-ಮಂಗಳಾರತಿ ಮಾಡಿ ಇರೋ ಗಾಂಜಾವನ್ನ ಗಣೇಶನ ಮುಂದಿಟ್ಟು ಫೋಟೋ ತೆಗೆಸಿ ರೆಗುಲರೈಸ್ ಮಾಡ್ಕೊಂಡು ಸೆಲ್ಲಿಗಾಕಿ ರುಬ್ಬಿದ್ದಾರೆ.ಸೆಲ್ಲಲ್ಲಿ ಕೂತ ಗಣೇಶ ಅಯ್ಯೋ ಊರಲ್ಲಿ ಪ್ಲಂಬಿಂಗ್ ಕೆಲಸ ಬೆವರು ತರ್ಸಿದ್ರೂ ಬದುಕು ಬೆಣ್ಣೆಯಂತಿತ್ತು. ಇದೀಗ ಈಜಿ ಬೆಣ್ಣೆ ತಿನ್ನೋಣಾ ಅಂತ ಗಾಂಜಾ ಗಮ್ಮತ್ತಿಗೆ ಕೈಹಾಕಿ ಪೊಲೀಸರಿಂದ ಗುಮ್ಮಿಸಿಕೊಂಡೆ ಅಂತ ತಲೆಮೇಲೆ ಕೈಹೊತ್ತು ಕುಳಿತವ್ನಂತೆ. ಒಟ್ಟಿನಲ್ಲಿ ಗಾಂಜಾ ಇಟ್ಟು ಕಾಸು ಮಾಡೋಕೆ ಹೋದವ್ನು ಮಾನ-ಮರ್ಯಾದೆ ಬಿಟ್ಟು ಜೈಲುಸೇರುವಂತಾಗಿದೆ.

ಇದನ್ನೂ ಓದಿ : ಕಿಚ್ಚನ ಮಾರ್ಕ್ ಸಿನಿಮಾದ ಮಸ್ತ್ ಮಲೈಕಾ ಸಾಂಗ್ ರಿಲೀಸ್!

Btv Kannada
Author: Btv Kannada

Read More