ಮಂಗಳೂರಿನಲ್ಲಿ ಕ್ರಿಕೆಟ್​​ ತೀರ್ಪುಗಾರನ ಮೇಲೆ ಹಲ್ಲೆ!

ಮಂಗಳೂರು : ಕ್ರಿಕೆಟ್ ತೀರ್ಪುಗಾರನ ಮೇಲೆ ಹಲ್ಲೆ ಮಾಡಿರುವ ಘಟನೆ ದ.ಕ. ಜಿಲ್ಲೆಯ ಪುತ್ತೂರಿನ ಉಪ್ಪಿನಂಗಡಿಯಲ್ಲಿ ನಡೆದಿದೆ. ಮಂಗಳೂರಿನ ರೋಲನ್ ಪಿಂಟೋ ಎಂಬ ತೀರ್ಪುಗಾರನ ಮೇಲೆ ಹಲ್ಲೆ ನಡೆಸಿದ್ದಾರೆ.

ಉಪ್ಪಿನಂಗಡಿಯಲ್ಲಿ ನಿನ್ನೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ನಡೆದಿದ್ದು, ಉಬಾರ್ ಕಪ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ವೇಳೆ ರೋಲನ್ ಪಿಂಟೋ LBW ತೀರ್ಪನ್ನ ಸರಿಯಾಗಿ ನೀಡಿದ್ದನು. ಆದರೆ ಹೊರಗಿನಿಂದ ಬಂದ ಕೆಲ ಯುವಕರು ತೀರ್ಪುಗಾರನ ಮೇಲೆ ಹಲ್ಲೆಗೈದಿದ್ದಾರೆ.

ಕಾನಾ-ಕೆಜಿಎಫ್ ನಡುವೆ ಸೆಮಿಫೈನಲ್ ಪಂದ್ಯ ನಡೆಯುತ್ತಿತ್ತು. ಈ ಪಂದ್ಯಾಟದ ವೇಳೆ ಬೆಟ್ಟಿಂಗ್ ನಡೆದಿರುವ ಸಾಧ್ಯತೆಯಿದ್ದು, ಈ ಹಿನ್ನೆಲೆ ತೀರ್ಪನ್ನ ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಕೆಲ ಯುವಕರ ಬೆಟ್ಟಿಂಗ್ ಎಡವಟ್ಟಿನಿಂದ ತೀರ್ಪುಗಾರನ ಮೇಲೆ ಹಲ್ಲೆ ನಡೆಸಲಾಗಿದ್ದು, ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಕರಾವಳಿಯಲ್ಲಿ ಅತೀ ಹೆಚ್ಚಾಗಿ ನಡೆಯುತ್ತಿದೆ.

ಇದನ್ನೂ ಓದಿ : ದೆಹಲಿಯಲ್ಲಿ ದಟ್ಟ ಮಂಜು – ಇಂಡಿಗೋ ವಿಮಾನದಲ್ಲಿ ರಾಜ್ಯದ 21 ಶಾಸಕರು‌ ಲಾಕ್!

Btv Kannada
Author: Btv Kannada

Read More