ಅವಧಿ ಮೀರಿ ಪಬ್ ಓಪನ್ – ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿನ್ ಪಬ್ ಮೇಲೆ FIR!

ಬೆಂಗಳೂರು : ನಿಗದಿತ ಅವಧಿ ಮೀರಿ ಪಬ್ ತೆರೆದಿದ್ದ ಹಿನ್ನೆಲೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ ಬ್ಯಾಸ್ಟಿನ್ ಪಬ್ ಮೇಲೆ ಕೆ.ಪಿ ಆ್ಯಕ್ಟ್ 103 ಅಡಿ FIR ದಾಖಲಾಗಿದೆ. ಈ ಬ್ಯಾಸ್ಟಿನ್ ಪಬ್ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಸೇಂಟ್ ಮಾರ್ಕ್ ರಸ್ತೆಯಲ್ಲಿದ್ದು, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ವರ್ತನೆಗಳಿಗೆ ಈ ಕಲಂ ಅಡಿಯಲ್ಲಿ ಕ್ರಮ ಜರುಗಿಸಲಾಗುತ್ತದೆ.

ಡಿಸೆಂಬರ್ 10ರಂದು ವಿಶೇಷ ಗಸ್ತು ಕರ್ತವ್ಯದಲ್ಲಿದ್ದ ಕಬ್ಬನ್ ಪಾರ್ಕ್ ಠಾಣಾ ಸಿಬ್ಬಂದಿ, ಡಿಸೆಂಬರ್ 11ರ ಬೆಳಗಿನ ಜಾವ 1:30ರ ವರೆಗೂ ನಿಯಮ ಉಲ್ಲಂಘಿಸಿ ಬ್ಯಾಸ್ಟಿನ್ ಪಬ್ ತೆರೆದಿರುವುದನ್ನು ಗಮನಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಸಿಬ್ಬಂದಿ, ಅವಧಿ ಮೀರಿ ಪಬ್ ತೆರೆದಿರುವುದನ್ನು ಖಚಿತಪಡಿಸಿಕೊಂಡು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ, ಬ್ಯಾಸ್ಟಿನ್ ಪಬ್‌ನ ಮ್ಯಾನೇಜರ್ ಮತ್ತು ಸಿಬ್ಬಂದಿ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 103ರ ಅಡಿಯಲ್ಲಿ FIR ದಾಖಲಿಸಲಾಗಿದೆ. ಕಾನೂನು ಉಲ್ಲಂಘನೆಗಾಗಿ ಪಬ್ ಸಿಬ್ಬಂದಿ ಇದೀಗ ಕಾನೂನು ಪ್ರಕ್ರಿಯೆಯನ್ನು ಎದುರಿಸುವಂತಾಗಿದೆ.

ಇದನ್ನೂ ಓದಿ : ಪೃಥ್ವಿ ಅಂಬಾರ್-ಧನ್ಯಾ ರಾಮ್ ಕುಮಾರ್ ನಟನೆಯ ‘ಚೌಕಿದಾರ್’ ಸಿನಿಮಾದ 3ನೇ ಸಾಂಗ್ ರಿಲೀಸ್!

Btv Kannada
Author: Btv Kannada

Read More