ಕೋಲ್ಕತ್ತಾ : ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರನ್ನು ನೋಡಲು ಬಂದಿದ್ದ ಅಭಿಮಾನಿಗಳು ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ದಾಂಧಲೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಸ್ಸಿ ಅವರು ‘ಗೋಟ್ ಇಂಡಿಯಾ ಟೂರ್’ ಭಾಗವಾಗಿ ಭಾರತಕ್ಕೆ ಆಗಮಿಸಿದ್ದರು. ಈ ಭೇಟಿಯ ವೇಳೆ ಅವರು ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂ ಹೊರಗೆ ತಮ್ಮ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಟಿಕೆಟ್ ಖರೀದಿಸಿ ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಯಿತು. ಕೇವಲ 10 ನಿಮಿಷಗಳಲ್ಲೇ ಲಿಯೋನೆಲ್ ಮೆಸ್ಸಿ ಮೈದಾನದಿಂದ ತೆರಳಿದರು. ಮೆಸ್ಸಿಯ ಈ ಹಠಾತ್ ನಿರ್ಗಮನದಿಂದ ಆಕ್ರೋಶಗೊಂಡ ಅಭಿಮಾನಿಗಳು ಕ್ರೀಡಾಂಗಣದೊಳಗೆ ಬಾಟಲಿ ಎಸೆದು ಭಾರೀ ಗಲಾಟೆ ನಡೆಸಿದರು. ಸ್ಟೇಡಿಯಂನ ಬ್ಯಾರಿಕೇಡ್‌ಗಳನ್ನು ಮುರಿದು ಹುಚ್ಚಾಟ ಮೆರೆದರು.
ಪರಿಸ್ಥಿತಿ ಕೈ ಮೀರುತ್ತಿದ್ದಂತೆ, ನೆರೆದಿದ್ದ ಅಭಿಮಾನಿಗಳ ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಬೇಕಾಯಿತು. ಲಾಠಿ ಚಾರ್ಜ್ ಮೂಲಕ ದಾಂಧಲೆ ನಡೆಸುತ್ತಿದ್ದ ಅಭಿಮಾನಿಗಳನ್ನು ಚದುರಿಸಿದ ಪೊಲೀಸರು.
ಇದನ್ನೂ ಓದಿ : ಆಂಟಿಯನ್ನೇ ಪಟಾಯಿಸ್ಕೊಂಡು ಓಡೋದ ಪೊಲೀಸಪ್ಪ – HSR ಲೇಔಟ್ ಕಾನ್ಸ್ಟೇಬಲ್ ರಾಘವೇಂದ್ರ ಸಸ್ಪೆಂಡ್!







