ನರ್ತಕಿ ಬಾರ್ ಮಾಲೀಕ ರಾಜಗೋಪಾಲ್ ಮೇಲೆ ಫೈರಿಂಗ್ ಮಾಡಿದ್ದ ಆರೋಪಿ ಅರೆಸ್ಟ್!

ಬೆಂಗಳೂರು : ನರ್ತಕಿ ಬಾರ್ ಮಾಲೀಕ ರಾಜ್ ಗೋಪಾಲ್ ಅವರ ಮೇಲೆ ಫೈರಿಂಗ್ ಮಾಡಿದ್ದ ಆರೋಪಿ ಮಹಮ್ಮದ್ ಅಫ್ಜಲ್‌ನನ್ನು ಬಸವನಗುಡಿ ಪೊಲೀಸರು  ಬಂಧಿಸಿದ್ದಾರೆ.

ಡಿಸೆಂಬರ್ 10ರ ರಾತ್ರಿ ಬಾರ್ ಮಾಲೀಕ ರಾಜ್ ಗೋಪಾಲ್ ಗೆ ಗುಂಡು ತಗುಲಿತ್ತು. ಸ್ಥಳೀಯರ ನೆರವಿನಿಂದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣದ ಗಂಭೀರತೆ ಅರಿತ ಬಸವನಗುಡಿ ಪೊಲೀಸರು ತಕ್ಷಣ ದೂರು ದಾಖಲಿಸಿ ತನಿಖೆ ಆರಂಭಿಸಿ, ಇದೀಗ ಆರೋಪಿ ಮಹಮ್ಮದ್ ಅಫ್ಜಲ್‌ನನ್ನು ಅರೆಸ್ಟ್ ಮಾಡಿದ್ದಾರೆ.

ವಿಚಾರಣೆ ವೇಳೆ ಆರೋಪಿ ಮಹಮ್ಮದ್ ಅಫ್ಜಲ್ ಏರ್‌ಗನ್‌ನಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿದ್ದೆ. ಈ ವೇಳೆ ಆಕಸ್ಮಿಕವಾಗಿ ರಾಜ್ ಗೋಪಾಲ್ ಅವರಿಗೆ ಗುಂಡು ತಗುಲಿರಬಹುದು, ಎಂದು ಪೊಲೀಸರಿಗೆ ಹೇಳಿದ್ದಾನೆ. ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಬಸವನಗುಡಿ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ : ‘ದಿ ಕ್ಯಾರಮ್ ಕ್ವೀನ್’ ಚಿತ್ರಕ್ಕೆ ಚೆನ್ನೈನಲ್ಲಿ ಮುಹೂರ್ತ – ಇದು ವಿಶ್ವ ಚಾಂಪಿಯನ್ ಎಂ.ಬಿ.ಖಾಜಿಮ ಅವರ ಬಯೋಪಿಕ್!

Btv Kannada
Author: Btv Kannada

Read More