ಬೆಂಗಳೂರು : ಹಿಟ್ & ರನ್ಗೆ ಇಬ್ಬರು ಮಹಿಳಾ ಕಾರ್ಮಿಕರು ಬಲಿಯಾಗಿರುವ ಘಟನೆ ಬೆಂಗಳೂರಿನ ಹೊಸಕೆರೆಹಳ್ಳಿಯ ನೈಸ್ ರಸ್ತೆಯಲ್ಲಿ ನಡೆದಿದೆ. ಯಾದಗಿರಿ ಮೂಲದ ರಂಗಮ್ಮ (45), ಚೌಡಮ್ಮ (55) ಮೃತ ದುರ್ದೈವಿಗಳು.
ನಿನ್ನೆ ಸಂಜೆ 5:54ರ ಸುಮಾರಿಗೆ ಭೀಕರ ಅಪಘಾತ ಸಂಭಸಿವಿಸಿದೆ. ಮಹಿಳಾ ಕಾರ್ಮಿಕರು ನೈಸ್ ರಸ್ತೆ ಬದಿ ಹುಲ್ಲು ತೆರವು ಮಾಡುತ್ತಿದ್ದರು. ಈ ರಂಗಮ್ಮ, ಚೌಡಮ್ಮಗೆ ವಾಹನ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಡಿಕ್ಕಿ ಹೊಡೆದು ವಾಹನದ ಜೊತೆಗೆ ಚಾಲಕ ಪರಾರಿಯಾಗಿದ್ದು, ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಚಾಲಕನ ಪತ್ತೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : ನೆಲಮಂಗಲ ಹೆಡ್ ಕಾನ್ಸ್ಟೇಬಲ್ನಿಂದ 25 ಕೋಟಿ ಮೌಲ್ಯದ ಭೂ ಕಬಳಿಕೆ – HC ಗಿರಿಜೇಶ್ & ಗ್ಯಾಂಗ್ ವಿರುದ್ಧ FIR!
Author: Btv Kannada
Post Views: 237







