ಬೆಂಗಳೂರು : ಸಸ್ಪೆಂಡ್ ಮಾಡಿದ್ರೂ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ವಂಚನೆ, ಅಕ್ರಮಗಳು ನಿಲ್ತಿಲ್ಲ. ವಂಚಕರನ್ನು ಸೆರೆ ಹಿಡಿಯಬೇಕಿದ್ದ ಪೊಲೀಸರೇ ಭೂಗಳ್ಳತನ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಪೊಲೀಸ್ ಇಲಾಖೆಯಲ್ಲಿದ್ದುಕೊಂಡೇ ನೆಲಮಂಗಲ ಠಾಣೆ ಹೆಡ್ ಕಾನ್ಸ್ಟೇಬಲ್ ಗಿರಿಜೇಶ್ ಕೋಟ್ಯಾಂತರ ಮೌಲ್ಯದ ಜಮೀನು ಕಬಳಿಸಿದ್ದಾನೆ.

ನೆಲಮಂಗಲ ಗ್ರಾ. ಠಾಣೆಯ ಹೆಡ್ ಕಾನ್ಸ್ಟೇಬಲ್ ಗಿರಿಜೇಶ್ ಸರ್ಕಾರದ ಖಾಕಿ ತೊಟ್ಟು ವಂಚನೆಗಿಳಿದಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬರೋಬ್ಬರಿ 25 ಕೋಟಿ ಮೌಲ್ಯದ ಜಮೀನು ಕಬಳಿಸಿರೋದು ಈಗ ಬಯಲಾಗಿದೆ. HC ಗಿರಿಜೇಶ್ ವಿರುದ್ಧ ನಕಲಿ ದಾಖಲೆ ರೆಡಿ ಮಾಡಿ ಜಮೀನು ರಿಜಿಸ್ಟರ್ ಮಾಡಿಸಿಕೊಂಡ ಆರೋಪ ಕೇಳಿಬಂದಿದ್ದು, 3-4 ವಂಚಕರು ಸೇರಿ ಒಟ್ಟು 8 ಎಕರೆ ಭೂಮಿ ರಿಜಿಸ್ಟರ್ ಮಾಡಿಸಿರುವ ಆಪಾದನೆ ಇದೆ. ಈ ಗ್ಯಾಂಗ್ ಮೂಲ ಮಾಲೀಕನಿಗೆ ಗೊತ್ತಿಲ್ಲದೇ 8 ಎಕರೆ ಭೂಮಿ ಲಪಟಾಯಿಸಿದೆ. ನೆಲಮಂಗಲದ ಹೆಡ್ ಕಾನ್ಸ್ಟೇಬಲ್ ಗಿರಿಜೇಶ್ ವಂಚನೆಯ ಮಾಸ್ಟರ್ ಮೈಂಡ್ ಆಗಿದ್ದು, ಇದೀಗ ಈ ಹೆಡ್ ಕಾನ್ಸ್ಟೇಬಲ್ ಗಿರಿಜೇಶ್ ವಂಚನೆ ಕಥೆಗಳು ಬಗೆದಷ್ಟು ಬಯಲಾಗ್ತಿವೆ.

ಹೆಡ್ ಕಾನ್ಸ್ಟೇಬಲ್ ಗಿರಿಜೇಶ್ ನಕಲಿ ದಾಖಲೆಗಳನ್ನು ಸೃಷ್ಟಿಸಿ 25 ಕೋಟಿ ಮೌಲ್ಯದ ಭೂಮಿ ಪರಭಾರೆ ಮಾಡಿಕೊಂಡಿದ್ದಾನೆ. ಈ ಹಿಂದೆ ಗಿರಿಜೇಶ್ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಹೆಡ್ ಕಾನ್ಸ್ಟೇಬಲ್ ಗಿರಿಜೇಶ್ ವಿರುದ್ಧ ಹಲವು ಕೇಸ್ಗಳು ದಾಖಲಾಗಿದ್ದವು. ಸಸ್ಪೆಂಡ್ ಆಗಿ ಮನೆಯಲ್ಲಿದ್ದರೂ ಬುದ್ಧಿ ಕಲಿಯದೇ ಮತ್ತೆ ಮತ್ತೆ ಅದೇ ಕೆಲಸ ಮಾಡ್ತಿದ್ದಾನೆ.

ಪೊಲೀಸ್ & ಗ್ಯಾಂಗ್ ಮೂಲ ಮಾಲೀಕನಿಗೆ ಗೊತ್ತಿಲ್ಲದೇ 8 ಎಕರೆ ಲಪಟಾಯಿಸಿದ್ದು, ವಂಚನೆ ಗೊತ್ತಾಗುತ್ತಿದ್ದಂತೆ ಪೊಲೀಸಪ್ಪ & ಗ್ಯಾಂಗ್ ಮೇಲೆ ದೂರು ದಾಖಲಾಗಿದೆ. ಇದೀಗ ನೆಲಮಂಗಲ ಗ್ರಾಮಾಂತರ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಿರಿಜೇಶ್ ಮೇಲೆ FIR ದಾಖಲಾಗಿದೆ. ಜೊತೆಗೆ ಮನೋಜ್, ರೋಹಿಣಿ ಸೇರಿದಂತೆ ಹಲವರ ಮೇಲೂ FIR ರಿಜಿಸ್ಟರ್ ಆಗಿದೆ.
ಥಾಂಪಿ ಮ್ಯಾಥ್ಯೂ ಎಂಬುವವರಿಂದ ಡಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಥ್ಯಾಂಪಿ ಮ್ಯಾಥ್ಯೂ ಹೆಸರಿನಲ್ಲಿ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿ, ಮಾಚನಹಳ್ಳಿ ಗ್ರಾಮದಲ್ಲಿ 8 ಎಕರೆ ಜಮೀನು ಇತ್ತು. ಸದ್ಯ ಈ 8 ಎಕರೆ ಜಮೀನು KIADB ವಶಪಡಿಸಿಕೊಂಡಿದೆ. KIADB ಪರಿಹಾರ ಹಣ ಲಪಟಾಯಿಸಲು ಪೊಲೀಸ್ ಗಿರಿಜೇಶ್ ಪ್ಲ್ಯಾನ್ ಮಾಡಿದ್ದ. ರಿಜಿಸ್ಟರ್ ಮಾಡಿಕೊಡದೇ ಇದ್ರೂ ಪಹಣಿಯಲ್ಲಿ ಗಿರಿಜೇಶ್ ಹಾಗೂ ಇನ್ನಿಬ್ಬರ ಹೆಸರು ಇತ್ತು. ಪಹಣಿಯಲ್ಲಿ ಇಬ್ಬರ ಹೆಸರು ಬಂದ ಹಿನ್ನೆಲೆ ಡಾಬಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಇದನ್ನೂ ಓದಿ : ಆಳಂದ ಮತಗಳ್ಳತನ ಕೇಸ್ – ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ!







