ನೆಲಮಂಗಲ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಮಾನವ ತಲೆಬುರುಡೆ ಪತ್ತೆ – ಸ್ಥಳೀಯರಿಂದ ಆತಂಕ!

ನೆಲಮಂಗಲ : ನೆಲಮಂಗಲ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ, ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಹಲವು ವರ್ಷಗಳ ಹಳೆಯ ಮಾನವ ತಲೆಬುರುಡೆ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ.

ತಲೆಬುರುಡೆ ಪತ್ತೆಯಾದ ಸ್ಥಳವು ಆಸ್ಪತ್ರೆಯ ಆವರಣದಲ್ಲೇ ಇದ್ದು, ನಿತ್ಯ ನೂರಾರು ರೋಗಿಗಳು, ಅವರ ಸಂಬಂಧಿಕರು ಮತ್ತು ಸಾರ್ವಜನಿಕರು ಓಡಾಡುವ ಜಾಗವಾಗಿದೆ. ಈ ರೀತಿ ಮನುಷ್ಯರ ದೇಹದ ಭಾಗಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಭಯ ಮೂಡಿಸಿದೆ.

ಇದೇನು ಸರ್ಕಾರಿ ಆಸ್ಪತ್ರೆನಾ? ಇಲ್ಲ ಸ್ಮಶಾನನಾ? ಆಸ್ಪತ್ರೆಯನ್ನು ಸ್ವಚ್ಛವಾಗಿ, ಸುರಕ್ಷಿತವಾಗಿ ಇಟ್ಟುಕೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲವೇ? ಸಾರ್ವಜನಿಕರು ಓಡಾಡುವ ಜಾಗದಲ್ಲಿ ಈ ರೀತಿ ತಲೆಬುರುಡೆ ಸಿಕ್ಕಿದೆ ಎಂದರೆ ಆಸ್ಪತ್ರೆಯ ನಿರ್ವಹಣೆ ಯಾವ ಮಟ್ಟದಲ್ಲಿದೆ ಎಂದು ಅರ್ಥವಾಗುತ್ತದೆ” ಎಂದು ಸ್ಥಳೀಯರು ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ವಿಧಾನಸಭೆಯಲ್ಲಿ ʻಗೃಹಲಕ್ಷ್ಮಿʼ ಕಿತ್ತಾಟ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಸುಳ್ಳು ಹೇಳಿದ ಆರೋಪ, ಆರ್.‌ ಅಶೋಕ್‌ ಆಕ್ರೋಶ!

Btv Kannada
Author: Btv Kannada

Read More