ಮಾಜಿ ಸಚಿವ H.M ರೇವಣ್ಣ ಪುತ್ರನಿಂದ ಹಿಟ್ ಅಂಡ್ ರನ್ – ಬೈಕ್​​ ಸವಾರ ದುರ್ಮರಣ!

ರಾಮನಗರ : ಮಾಜಿ ಸಚಿವ ಹೆಚ್ ಎಂ ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಟೋಲ್ ಬಳಿ ನಡೆದಿದೆ.

ಹೆಚ್ ಎಂ ರೇವಣ್ಣ ಪುತ್ರ ಶಶಾಂಕ್‌ ಫಾರ್ಚೂನರ್ ಕಾರ್ ಬೈಕ್​ಗೆ ಡಿಕ್ಕಿ ಹೊಡೆದು ಸವಾರ ರಾಜೇಶ್ (23) ಮೃತಪಟ್ಟಿದ್ದಾನೆ. ನಿನ್ನೆ ರಾತ್ರಿ 10.30ರ ಸುಮಾರಿಗೆ ಶಶಾಂಕ್‌ ಅಪಘಾತವೆಸಗಿ ಎಸ್ಕೇಪ್ ಆಗಿದ್ದಾನೆ.

ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಟೋಲ್‌ ನೂರು ಮೀಟರ್ ಬಳಿ ಕಾರು ಗುದ್ದಿದ್ದು, ಈ ವಿಚಾರ ತಿಳಿದ ಸ್ಥಳೀಯರು 5 ಕಿ.ಮೀ. ಚೇಸ್ ಮಾಡಿ ಸನ್‌ ಫ್ಲವರ್‌ ಫ್ಯಾಕ್ಟರಿ ಬಳಿ ಅಡ್ಡಗಟ್ಟಿ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಕಾರಿನಿಂದ ಇಳಿದ ಬಳಿಕ ಶಶಾಂಕ್‌ ನಾನು ಯಾರು ಗೊತ್ತಾ? ಹೆಚ್‌ಎಂ ರೇವಣ್ಣ ಪುತ್ರ ಎಂದು ಅವಾಜ್‌ ಹಾಕಿದ್ದಾರೆ. ನಂತರ ಕಾರನ್ನು ಬದಿಯಲ್ಲಿ ನಿಲ್ಲಿಸುತ್ತೇನೆ ಎಂದು ಹೇಳಿ ಶಶಾಂಕ್‌ ಪರಾರಿಯಾಗಿದ್ದಾರೆ. ಕಾರಿನಲ್ಲಿ ರೇವಣ್ಣ ಕುಟುಂಬಸ್ಥರು ಇದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ತಮ್ಮನಿಂದಲೇ ಅಣ್ಣನ ಭೀಕರ ಹತ್ಯೆ!

Btv Kannada
Author: Btv Kannada

Read More