ಬೆಂಗಳೂರಿನಲ್ಲಿ ತಮ್ಮನಿಂದಲೇ ಅಣ್ಣನ ಭೀಕರ ಹತ್ಯೆ!

ಬೆಂಗಳೂರು : ತಮ್ಮನಿಂದಲೇ ಅಣ್ಣನ ಕೊಲೆಯಾಗಿರುವ ಘಟನೆ ಬನಶಂಕರಿಯ ಯಾರಬ್ ನಗರದಲ್ಲಿ ನಡೆದಿದೆ. ಅಣ್ಣ ಮೊಹಮ್ಮದ್ ಮುಜಾಹಿದ್ (35) ಕೊಲೆಯಾದ ವ್ಯಕ್ತಿ.

ಮೊಹಮದ್ ಮುಸೇನ್ ಎಂಬಾತ ಸ್ವಂತ ಅಣ್ಣನನ್ನೇ ಕೊಲೆ ಮಾಡಿದ್ದಾನೆ. ತಾಯಿಗೆ ಬೈದ ವಿಚಾರಕ್ಕೆ ಅಣ್ಣ-ತಮ್ಮನ ನಡುವೆ ಜಗಳವಾಗಿದ್ದು, ಈ ವೇಳೆ ಮನೆಯಲ್ಲಿದ್ದ ವಸ್ತುಗಳಿಂದ ಇಬ್ಬರು ಹೊಡೆದಾಡಿಕೊಂಡಿದ್ದಾರೆ.

ಹೊಡೆದಾಟದಲ್ಲಿ ಮುಸೇನ್, ಮುಜಾಹಿದ್ನ​ನ್ನು ಕೊಲೆಗೈದಿದ್ದು, ಆರೋಪಿ ಮುಸೇನ್​ಗೂ ಗಾಯಗಳಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : 17 ಕೋಟಿ ವಂಚನೆ – ಖ್ಯಾತ ಮಹಿಳಾ ಉದ್ಯಮಿ ಸ್ನೇಹಾ ರಾಕೇಶ್ ವಿರುದ್ಧ FIR!

Btv Kannada
Author: Btv Kannada

Read More