ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಹಿಂದಿವಾಲಗಳ ದೌಲತ್ತು ಮುಂದುವರಿದಿದ್ದು, ಈ ಬಾರಿ ಕನ್ನಡಿಗರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಈ ಸಂಬಂಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿವಿಕೆ ರಸ್ತೆಯಲ್ಲಿರುವ ಜೆಡಿ ಎಲೆಕ್ಟ್ರಿಕಲ್ ಅಂಡ್ ಲೈಟಿಂಗ್ಸ್ ಅಂಗಡಿ ಮಾಲೀಕ ಜಲಾಮ್ ಎಂಬಾತ ತನ್ನ ಅಂಗಡಿಗೆ ಖರೀದಿಗೆಂದು ಬಂದಿದ್ದ ಗ್ರಾಹಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಗ್ರಾಹಕರಿಗೆ ನಿಂದಿಸಿದ್ದಲ್ಲದೆ, ಕನ್ನಡ ನನ್ನ…! ಎಂದು ಅವಾಚ್ಯ ಶಬ್ದಗಳನ್ನು ಬಳಸಿ ಕನ್ನಡ ಭಾಷೆ ಹಾಗೂ ಕನ್ನಡಿಗರ ವಿರುದ್ಧ ದುರ್ವರ್ತನೆ ತೋರಿದ್ದಾನೆ.

ಕನ್ನಡದ ಬಗ್ಗೆ ಹಗುರವಾಗಿ ನಾಲಿಗೆ ಹರಿಬಿಟ್ಟು, ಅವಾಚ್ಯ ಶಬ್ದಗಳಿಂದ ಬೈದಿದ್ದಕ್ಕೆ ಸಿಟ್ಟಿಗೆದ್ದ ಗ್ರಾಹಕರು ಕೂಡಲೇ ಈ ಕುರಿತು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ, ಜೆಡಿ ಎಲೆಕ್ಟ್ರಿಕಲ್ ಅಂಡ್ ಲೈಟಿಂಗ್ಸ್ ಅಂಗಡಿ ಮಾಲೀಕನಾದ ಜಲಾಮ್ ವಿರುದ್ಧ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.



ಇದನ್ನೂ ಓದಿ : ಪೊಲೀಸರ ವಿರುದ್ಧ ಸೈಲೆಂಟ್ ಸುನೀಲ್ ಕುಮಾರ್ಗೆ ಭಾರಿ ಜಯ!







