ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ – ಸಚಿವ ಡಾ. ಜಿ ಪರಮೇಶ್ವರ್!

ಬೆಳಗಾವಿ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ದರೋಡೆ, ಕಳ್ಳತನ ಮತ್ತು ಸುಲಿಗೆ ಪ್ರಕರಣಗಳನ್ನು ಹತ್ತಿಕ್ಕಲು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಪ್ರಶ್ನೆ ಕೇಳಿದರು. ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ದರೋಡೆ, ಕಳ್ಳತನ, ಸುಲಿಗೆ ಸುಮಾರು 1 ಲಕ್ಷ ಕೇಸ್ ದಾಖಲಾಗಿದೆ. ಇದರಲ್ಲಿ 63% ಕೇಸ್ ಇತ್ಯರ್ಥ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜನರು ಭಯಗೊಂಡಿದ್ದಾರೆ. 8 ತಿಂಗಳಲ್ಲಿ 10 ಎಸಿಪಿ ಲೋಕಾಯುಕ್ತ ಟ್ರ‍್ಯಾಪ್ ಆಗಿದ್ದಾರೆ. ರಾಜ್ಯ ಕಳ್ಳಕಾಕರ ರಾಜ್ಯ ಆಗುತ್ತಿದೆ. ಪರಪ್ಪನ ಅಗ್ರಹಾರದಲ್ಲಿ ಭಯೋತ್ಪಾದಕರು ಫೋನ್‌ನಲ್ಲಿ ಮಾತನಾಡುತ್ತಾರೆ. ಇದನ್ನ ನೋಡಿದ್ರೆ ಗೃಹ ಸಚಿವರಿಗೆ ಇಲಾಖೆ ಮೇಲೆ ಕಂಟ್ರೋಲ್ ಇದೆಯಾ ಇಲ್ಲ ಅಂತ ಅನುಮಾನ ಬರುತ್ತದೆ. ದಕ್ಷ ಅಧಿಕಾರಿಗಳನ್ನ ಹಾಕಿ ಇಂತಹ ಅನಾಹುತ ತಡೆಯಬೇಕು ಎಂದು ಆಗ್ರಹಿಸಿದರು

ಇದಕ್ಕೆ ಸಚಿವ ಪರಮೇಶ್ವರ್ ಉತ್ತರ ನೀಡಿ, ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಉತ್ತಮವಾಗಿದೆ. 900 ಪಿಎಸ್‌ಐ ನೇಮಕಾತಿ ಮಾಡಿದ್ದು ನಮ್ಮ ಸರ್ಕಾರ. ಅವರಿಗೆ ಇಲ್ಲಿ ಡ್ಯೂಟಿ ಹಾಕಿದ್ದೇನೆ. ನೇಮಕಾತಿ ಕೂಡ ಮಾಡಿದ್ದೇವೆ. 3,600 ಪೊಲೀಸ್ ಪೇದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬಿಜೆಪಿ ಸರ್ಕಾರದಲ್ಲಿ ನೇಮಕಾತಿಯೇ ಆಗಿರಲಿಲ್ಲ. ಈಗ ಮಾಡಿದ್ದೇವೆ ಎಂದರು.

ಇದನ್ನೂ ಓದಿ : ಕ್ರೀಡಾಪಟುಗಳಿಗೆ ಎಲ್ಲಾ ಇಲಾಖೆಗಳಲ್ಲಿ 2% ಉದ್ಯೋಗ ಮೀಸಲಾತಿ – ಸಿಎಂ ಸಿದ್ದರಾಮಯ್ಯ ಘೋಷಣೆ!

Btv Kannada
Author: Btv Kannada

Read More