ದೂರು ಕೊಡಲು ಬಂದ ಯುವತಿಗೆ ಹಾಸಿಗೆ ಏರಲು ಹೇಳಿದ ASI – ಇದು ಬೆಂಗಳೂರು DJ ಹಳ್ಳಿ ASI ಪ್ರಕಾಶನ ಕಾಮಪುರಾಣ!

ಬೆಂಗಳೂರು : ರೌಡಿಶೀಟರ್‌ನ ಕಾಟದಿಂದ ನೊಂದ ಯುವತಿಯೊಬ್ಬಳು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದರೆ, ಆಕೆಯ ಸಮಸ್ಯೆಯನ್ನು ಬಗೆಹರಿಸುವ ಬದಲು ಡಿಜೆ ಹಳ್ಳಿ ಪೊಲೀಸ್ ಠಾಣೆ ASI ಪ್ರಕಾಶ್ ಆಕೆಯನ್ನು ಹಾಸಿಗೆ ಏರುವಂತೆ ಒತ್ತಾಯಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ASI ಪ್ರಕಾಶ್
  ASI ಪ್ರಕಾಶ್

ಬೆಂಗಳೂರು DJ ಹಳ್ಳಿ ASI ಪ್ರಕಾಶನ ಕಾಮಪುರಾಣ ಇದೀಗ ಬಯಲಾಗಿದ್ದು, ಎಎಸ್‌ಐ ಪ್ರಕಾಶ್ ಅವರ ಕಾಮತೃಷೆಗೆ ನೊಂದ ಯುವತಿ ಈಗ ನೇರವಾಗಿ ಪೊಲೀಸ್ ಕಮಿಷನರ್ ಕಚೇರಿ ಮೊರೆ ಹೋಗಿದ್ದಾರೆ.

ಏನಿದು ಘಟನೆ? 

ನೊಂದ ಯುವತಿಯು ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಬಾಬಿ ಡಿಯೋಲ್ ಎಂಬಾತನ ಮನೆಯಲ್ಲಿ ಬಾಡಿಗೆಗೆ ವಾಸವಿದ್ದಳು. ರೌಡಿಯ ಕಿರಿಕಿರಿ ಮತ್ತು ಕಾಟ ಹೆಚ್ಚಾದ ಕಾರಣ ಯುವತಿ ಮನೆ ಖಾಲಿ ಮಾಡಲು ಮುಂದಾಗಿದ್ದಳು. ಆದರೆ, ಮನೆ ಖಾಲಿ ಮಾಡುವ ವೇಳೆ ಲೀಸ್ ಅಮೌಂಟ್ ನೀಡಲು ರೌಡಿ ಡಿಯೋಲ್ ಸತಾಯಿಸಿದ್ದ. ಇದರಿಂದ ಮನನೊಂದ ಯುವತಿ ಹಣವನ್ನು ವಾಪಸ್ ಪಡೆಯಲು ಸಹಾಯ ಕೋರಿ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಳು.

ದೂರು ನೀಡಲು ಬಂದ ಯುವತಿಯನ್ನು ಕಂಡ ಠಾಣೆಯಲ್ಲಿದ್ದ ಎಎಸ್‌ಐ ಪ್ರಕಾಶ್ ತಮ್ಮ ಕಣ್ಣಲ್ಲೇ ಕಾಮದಾಟ ಶುರುಮಾಡಿದ್ದನಂತೆ. ನಂತರ ನಿನ್ನ ಹಣವನ್ನು ರಿಕವರಿ ಮಾಡಿಸಿಕೊಡುತ್ತೇನೆ, ಆದರೆ ನೀನು ನನ್ನ ಮನೆಗೆ ಬಾ ಅಂದ್ನಂತೆ. ಇದರಿಂದ ಹೆದರಿದ ಹೆಣ್ಮಗಳು ಇದೀಗ ASI ಪ್ರಕಾಶನ ವಿರುದ್ಧ ಸಿಡಿದು ಬಿದ್ದಿದ್ದಾಳೆ. ನೇರಾನೇರಾ ಕಮಿಷನರ್​​ ಕಚೇರಿಗೆ ತೆರಳಿ ದೂರನ್ನ ಕೂಡ ನೀಡಿದ್ದಾಳೆ.

ಇದನ್ನೂ ಓದಿ : ಕಾರಾಗೃಹ ಇಲಾಖೆ ಡಿಜಿಪಿಯಾಗಿ ಅಲೋಕ್​​ ಕುಮಾರ್​​ ಅಧಿಕಾರ ಸ್ವೀಕಾರ!

Btv Kannada
Author: Btv Kannada

Read More