ಬೆಂಗಳೂರು : ರಾಜ್ಯ ಸರ್ಕಾರವು ಇಬ್ಬರು ಹಿರಿಯ ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಬಹುನಿರೀಕ್ಷಿತ ಡಿಜಿಪಿ (DG) ಹುದ್ದೆ ಒಲಿದಿದ್ದು, ಅವರನ್ನು ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳ ಮಹಾ ನಿರ್ದೇಶಕರಾಗಿ (DGP) ವರ್ಗಾಯಿಸಲಾಗಿದೆ. ಕಾರಾಗೃಹ ಸೇವೆಗಳ ಎಡಿಜಿಪಿ (ADGP) ಆಗಿದ್ದ ಬಿ. ದಯಾನಂದ್ ಅವರನ್ನು ಪೊಲೀಸ್ ತರಬೇತಿ ಕೇಂದ್ರದ ಎಡಿಜಿಪಿ ಆಗಿ ನೇಮಿಸಲಾಗಿದೆ.

ದಕ್ಷ ಅಧಿಕಾರಿ ಎಂದು ಗುರುತಿಸಲ್ಪಟ್ಟಿರುವ ಅಲೋಕ್ ಕುಮಾರ್ ಅವರಿಗೆ ಇದೇ ಮೊದಲ ಬಾರಿಗೆ ಡಿಜಿಪಿ ಶ್ರೇಣಿಯ ಹುದ್ದೆ ದೊರೆತಂತಾಗಿದೆ. ಕಳೆದ ಹಲವು ದಿನಗಳಿಂದ ಅವರು ಈ ಉನ್ನತ ಹುದ್ದೆಗಾಗಿ ನಿರೀಕ್ಷೆಯಲ್ಲಿದ್ದರು. ರಾಜ್ಯ ಸರ್ಕಾರವು ಅಂತಿಮವಾಗಿ ಅವರನ್ನು ಕಾರಾಗೃಹ ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಮೂಲಕ ಅವರ ಬೇಡಿಕೆಯನ್ನು ಈಡೇರಿಸಿದೆ.

ಕಾರಾಗೃಹ ಇಲಾಖೆಯಿಂದ ವರ್ಗಾವಣೆಗೊಂಡ ಬಿ. ದಯಾನಂದ್ ಅವರಿಗೆ ಪೊಲೀಸ್ ತರಬೇತಿ ಕೇಂದ್ರದ ಎಡಿಜಿಪಿ ಹುದ್ದೆ ನೀಡಲಾಗಿದೆ. ಕಾಲ್ತುಳಿತ ಪ್ರಕರಣದ ಕಾರಣದಿಂದ ಅವರಿಗೆ ಡಿಜಿಪಿ ಶ್ರೇಣಿಯ ಹುದ್ದೆ ದೊರೆತಿಲ್ಲ, ಅವರು ಎಡಿಜಿಪಿ ಶ್ರೇಣಿಯಲ್ಲೇ ಮುಂದುವರಿದಿದ್ದಾರೆ.
ಇದನ್ನೂ ಓದಿ : ವಿದ್ಯುತ್ ಕಂಬದಲ್ಲೇ ಯುವಕ ದುರ್ಮರಣ – ಹೈವೋಲ್ಟೇಜ್ ಶಾಕ್‌ಗೆ ಬಲಿಯಾದ 18 ವರ್ಷದ ಶ್ರೀಮಂತ್!







