ವಿದ್ಯುತ್ ಕಂಬದಲ್ಲೇ ಯುವಕ ದುರ್ಮರಣ – ಹೈವೋಲ್ಟೇಜ್ ಶಾಕ್‌ಗೆ ಬಲಿಯಾದ 18 ವರ್ಷದ ಶ್ರೀಮಂತ್!

ಕಲಬುರಗಿ : ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹೋಗಿ ಯುವಕ ದುರ್ಮರಣಕ್ಕೀಡಾಗಿರುವ ಘಟನೆ ಕಲಬುರಗಿಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆದಿದೆ. ಅರಳಗುಂಡಗಿ ನಿವಾಸಿ ಶ್ರೀಮಂತ್ ಸುಭಾನ್ (18) ಮೃತ ದುರ್ದೈವಿ.

ವಿದ್ಯುತ್ ಸಂಪರ್ಕಕ್ಕಾಗಿ ಕಂಬ ಏರಿದ್ದ ಶ್ರೀಮಂತ್ ಸುಭಾನ್‌ಗೆ ಹೈವೋಲ್ಟೇಜ್ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮನೆಗಳಿಗೆ ವಿದ್ಯುತ್ ಪೂರೈಸುವ ಟ್ರಾನ್ಸ್​ಫಾರ್ಮರ್ ಬಂದ್ ಆಗಿದ್ದರೂ, ಜಮೀನುಗಳಿಗೆ ವಿದ್ಯುತ್ ನೀಡುವ ಟ್ರಾನ್ಸ್​ಫಾರ್ಮರ್ ಬಂದ್ ಮಾಡದಿರುವುದು ದುರಂತಕ್ಕೆ ಕಾರಣವಾಗಿದೆ.

ಇಲಾಖೆಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಯಿತೇ ಎಂಬ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ನಾಳೆ ರಾಜ್ಯಾದ್ಯಂತ ‘ದಿ ಡೆವಿಲ್’ ರಿಲೀಸ್ – ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಸ್ವಾಗತಕ್ಕೆ ಅಭಿಮಾನಿಗಳಿಂದ ಭರ್ಜರಿ ಸಿದ್ಧತೆ!

Btv Kannada
Author: Btv Kannada

Read More