ಬೀದರ್‌ನಲ್ಲಿ ಭೀಕರ ದುರಂತ – ಶಾಲಾ ವಾಹನ ಹರಿದು 8 ವರ್ಷದ ಬಾಲಕಿ‌ ದುರ್ಮರಣ!

ಬೀದರ್ : ಬೀದರ್‌ನ ಜನವಾಡಾ ಗ್ರಾಮದ ಪೊಲೀಸ್ ಕ್ವಾರ್ಟರ್ಸ್ ಬಳಿ ನಡೆದ ದುರಂತದಲ್ಲಿ, 8 ವರ್ಷದ ಬಾಲಕಿ ರುತ್ವಿ, ತನ್ನದೇ ಶಾಲಾ ವಾಹನ ಹರಿದು ದಾರುಣವಾಗಿ ಸಾವನ್ನಪ್ಪಿದ್ದಾಳೆ. ರುತ್ವಿ ಗಡಿಕುಶನೂರು ಗ್ರಾಮದ ನಿವಾಸಿಯಾಗಿದ್ದು, ಜನವಾಡ ಗ್ರಾಮದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು.

ಖಾಸಗಿ ಶಾಲಾ ಬಸ್ ಚಾಲಕ ವಿದ್ಯಾರ್ಥಿನಿ ರುತ್ವಿಯನ್ನು ಮನೆಯ ಬಳಿ ಇಳಿಸಿದ್ದರು. ರುತ್ವಿ ಬಸ್‌ನಿಂದ ಇಳಿದು ಅದರ ಪಕ್ಕ ನಿಂತಿದ್ದಳು. ಇದನ್ನು ಗಮನಿಸದ ಚಾಲಕ ಬಸ್ ಚಲಾಯಿಸಿದ್ದರಿಂದ ರುತ್ವಿ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಒಂದು ಕ್ಷಣದ ಚಾಲಕನ ನಿರ್ಲಕ್ಷ್ಯವು ಪುಟ್ಟ ಕಂದಮ್ಮನ ಜೀವವನ್ನು ಬಲಿ ತೆಗೆದುಕೊಂಡಿದೆ. ಮಗು ರುತ್ವಿ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ : ವಿಧಾನಸಭೆಯಲ್ಲಿ ದ್ವೇಷ ಭಾಷಣ ಪ್ರತಿಬಂಧಕ ಬಿಲ್ ಮಂಡನೆ – ಬಿಜೆಪಿಯಿಂದ ತೀವ್ರ ವಿರೋಧ!

Btv Kannada
Author: Btv Kannada

Read More