ದರ್ಶನ್​ ಆಪ್ತ ನಟ ಧನ್ವೀರ್​​ಗೆ ಮತ್ತೊಂದು ಸಂಕಷ್ಟ – ಧನ್ವೀರ್ ವಿರುದ್ಧ ಸಾಕ್ಷ್ಯ ನಾಶ ಮಾಡಿದ ಕೇಸ್ ದಾಖಲು?

ಬೆಂಗಳೂರು : ದರ್ಶನ್​ ಆಪ್ತ ನಟ ಧನ್ವೀರ್​​ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಧನ್ವೀರ್ ವಿರುದ್ಧ ಸಾಕ್ಷ್ಯ ನಾಶ ಮಾಡಿದ ಕೇಸ್ ದಾಖಲಾಗಿದೆ ಎನ್ನಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ವಿಡಿಯೋ ವೈರಲ್ ಪ್ರಕರಣ ಸಂಬಂಧ ಧನ್ವೀರ್ ಮೊಬೈಲ್ ರಿಟ್ರಿವ್ ರಿಪೋರ್ಟ್ ಪೊಲೀಸರ ಕೈ ಸೇರಿದ್ದು, ರಿಟ್ರಿವ್ ವೇಳೆ ಧನ್ವೀರ್ ಮೊಬೈಲ್​ನಲ್ಲಿ ಯಾವುದೇ ಡೇಟಾ ಇರಲಿಲ್ಲ. ಹಾಗಾಗಿ ಧನ್ವೀರ್ ಮೊಬೈಲ್ ಚೇಂಜ್ ಮಾಡಿ ಕೊಟ್ಟಿದ್ದಾರಾ ಅನ್ನೋ ಶಂಕೆ ವ್ಯಕ್ತವಾಗಿದೆ.

ಜೈಲಿನ ವಿಡಿಯೋ ವೈರಲ್ ಹಿಂದಿನ ಕಾಣದ ಕೈ ಇನ್ನೂ ನಿಗೂಢವಾಗಿದ್ದು, ಇದುವರೆಗೂ ವಿಡಿಯೋ ವೈರಲ್ ಮಾಡಿದವರ ಮಾಹಿತಿ ಸಿಕ್ಕಿಲ್ಲ. ಜೈಲಿನಿಂದ ಬಂದಿದ್ದ ವಿಡಿಯೋವನ್ನು ಧನ್ವೀರ್ ವೈರಲ್ ಮಾಡಿದ್ದರು, FSL ರಿಪೋರ್ಟ್ ಬಳಿಕ ಚಾರ್ಜ್ ಶೀಟ್ ಮಾಡಿ ಧನ್ವೀರ್ ಬಂಧಿಸೋ ಸಾಧ್ಯತೆಯಿದೆ. ಸಾಕ್ಷಿ ನಾಶ ಮಾಡಿರುವ ಬಗ್ಗೆ ಪೊಲೀಸರು ಚಾರ್ಜ್ ಶೀಟ್​ನಲ್ಲಿ ಉಲ್ಲೇಖಿಸಿದ್ದು, ಪರಪ್ಪನ ಅಗ್ರಹಾರ ಪೊಲೀಸರು ಧನ್ವೀರ್ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.

ಪೊಲೀಸರ ಕೈ ಸೇರಿದ ನಟ ಧನ್ವೀರ್ ಮೊಬೈಲ್ ರಿಟ್ರೀವ್ ವರದಿ : ಪರಪ್ಪನ ಅಗ್ರಹಾರದ ಜೈಲಿನ ರಾಜಾತಿಥ್ಯ ವೀಡಿಯೋ ವೈರಲ್ ಕೇಸ್ ಸಂಬಂಧ ನಟ ಧನ್ವೀರ್ ಮೊಬೈಲ್ ರಿಟ್ರೀವ್ ವರದಿ ಪೊಲೀಸರ ಕೈ ಸೇರಿದೆ. ರಿಟ್ರೀವ್ ವೇಳೆ ಧನ್ವೀರ್ ಮೊಬೈಲ್​ನಲ್ಲಿ ಡೇಟಾನೇ ಇಲ್ಲವಂತೆ. ಸೈಬರ್ ಸೆಲ್ ಕೊಟ್ಟ ರಿಪೋರ್ಟ್ ಪರಪ್ಪನ ಅಗ್ರಹಾರ ಪೊಲೀಸರ ಕೈಗೆ ಸಿಕ್ಕಿದ್ದು, ನಟ ಧನ್ವೀರ್ ಡೇಟಾವೇ ಇಲ್ಲದ ಮೊಬೈಲ್ ಕೊಟ್ಟು ಯಾಮಾರಿಸಿದ್ದಾರೆ. ಸೈಬರ್ ಸೆಲ್ ರಿಪೋರ್ಟ್ ಜೊತೆ ಪೊಲೀಸರು FSL ರಿಪೋರ್ಟ್​ಗಾಗಿ ಕಾಯ್ತಿದ್ದಾರೆ. FSL ರಿಪೋರ್ಟ್ ಬಂದ ಬಳಿಕ ಚಾರ್ಜ್ ಶೀಟ್ ಹಾಕಲು ಪೊಲೀಸರು ತೀರ್ಮಾನಿಸಿದ್ದು, ನಟ ಧನ್ವೀರ್ ಸಾಕ್ಷ್ಯ ನಾಶ ಮಾಡಿದ್ದಾರೆ ಅಂತ ಚಾರ್ಜ್ ಶೀಟ್​ನಲ್ಲಿ ಉಲ್ಲೇಖ ಮಾಡಲಾಗುತ್ತೆ. ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ವಿಡಿಯೋಗಳು ವೈರಲ್ ಮಾಡಿದವರ ಬೆನ್ನುಬಿದ್ದ ಖಾಕಿ : ಪೊಲೀಸರು ಜೈಲಿನಲ್ಲಿ ರಾಜಾತಿಥ್ಯ ವಿಡಿಯೋಗಳು ವೈರಲ್ ಮಾಡಿದವರ ಬೆನ್ನುಬಿದ್ದಿದ್ದು, ಮೊದಲಿಗೆ ವಿಡಿಯೋ ಚಿತ್ರೀಕರಣ ಮಾಡಿದ್ದ ಕೈದಿ ಕೋಳಿ ಮಂಜನನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಕೋಳಿ ಮಂಜ, ವಿಲ್ಸನ್ ಗಾರ್ಡನ್ ನಾಗ ಹೆಸರು ಹೇಳಿದ್ದಾನೆ. ವಿಡಿಯೋ ಮಾಡಲು ಹೇಳಿದ್ದೇ ವಿಲ್ಸನ್ ಗಾರ್ಡನ್ ನಾಗ ಎಂದು ಕೋಳಿ‌ ಮಂಜ ಹೇಳಿದ್ದು, ಕೋಳಿ ಮಂಜನ ಹೇಳಿಕೆ ಹಿನ್ನಲೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ವಿಲ್ಸನ್ ಗಾರ್ಡನ್ ನಾಗನನ್ನು ವಿಚಾರಣೆ ಮಾಡಿದ್ದಾರೆ.

ಈ ವೇಳೆ ನಾನು ಮೊಬೈಲ್ ಬಳಸಿಯೇ ತುಂಬಾ ವರ್ಷಗಳಾಗಿದೆ, ಜೈಲಿನಲ್ಲಿ ಯಾರಿಗೆ ಮೊಬೈಲ್ ಸಿಗುತ್ತೋ ಗೊತ್ತಿಲ್ಲ, ನನಗಂತೂ ಸಿಕ್ಕಿಲ್ಲ. ಬೇಕು ಅಂತ ಇದರಲ್ಲಿ ನನ್ನ ಸಿಲುಕಿಸೋ ಕೆಲಸ ಆಗ್ತಾ ಇದೆ ಎಂದು ನಾಗ ಹೇಳಿದ್ದಾರೆ. ಕೋಳಿ ಮಂಜ ಯಾರೂ ಅನ್ನೋದೇ ಗೊತ್ತಿಲ್ಲ, ನನಗೂ ಈ ವಿಡಿಯೋ ವೈರಲ್‌ಗೂ ಸಂಬಂಧ ಇಲ್ಲ ಅಂತಾ ಪರಪ್ಪನ ಅಗ್ರಹಾರ ಪೊಲೀಸರ ಮುಂದೆ ನಾಗ ಅಳಲು ತೋಡಿಕೊಂಡಿದ್ದಾನೆ.

ಇದನ್ನೂ ಓದಿ : ದರ್ಶನ್ ಜೈಲಲ್ಲಿ ಯಾರ ಮೇಲೂ ಹಲ್ಲೆ ಮಾಡಿಲ್ಲ – ವಿಜಯಲಕ್ಷ್ಮೀ ಸ್ಪಷ್ಟನೆ!

Btv Kannada
Author: Btv Kannada

Read More