ಹಾವೇರಿ : ಟ್ರ್ಯಾಕ್ಟರ್ ರೋಟರ್ ಯಂತ್ರಕ್ಕೆ ಸಿಲುಕಿ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ಹಾವೇರಿಯ ನೆಗಳೂರು ಗ್ರಾಮದಲ್ಲಿ ನಡೆದಿದೆ. ಪ್ರಕಾಶ್ ಚಂದ್ರಶೇಖರಪ್ಪ ಶಿಡೇನೂರ(40) ಮೃತ ದುರ್ದೈವಿ.

ಪ್ರಕಾಶ್ ಜಮೀನಿನಲ್ಲಿ ರೋಟರ್ ಮೂಲಕ ಕಸ ಕ್ಲೀನ್ ಮಾಡ್ತಿದ್ದ. ಈ ವೇಳೆ ಆಯತಪ್ಪಿ ಬಿದ್ದು ರೋಟರ್ಗೆ ಸಿಲುಕಿ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರೋಟರ್ಗೆ ಸಿಲುಕಿರೋ ಹಿನ್ನೆಲೆ ಪ್ರಕಾಶ್ ಮೃತದೇಹ ಛಿದ್ರ ಛಿದ್ರವಾಗಿದ್ದು, ಘಟನಾ ಸ್ಥಳಕ್ಕೆ ಗುತ್ತಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಕಾರವಾರ ಜೈಲಿನಲ್ಲಿ ಮತ್ತೆ ಕೈದಿಗಳ ದಾಂಧಲೆ – ಮಾದಕವಸ್ತು ಕೊಟ್ಟಿಲ್ಲವೆಂದು ಟಿವಿ ಒಡೆದು ಗಲಾಟೆ!
Author: Btv Kannada
Post Views: 247







