ಬೆಚ್ಚಿ ಬಿದ್ದ ಹಾಸನ.. ನಶೆ ಏಟಲ್ಲಿ ಯುವಕನ ಬರ್ಬರ ಹತ್ಯೆ – ಶವದ ಮುಂದೆ ಸೆಲ್ಫಿ ವಿಡಿಯೋ ಮಾಡಿದ ಕಿರಾತಕ!

ಹಾಸನ : ಹಾಸನ ನಗರ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬನನ್ನು ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೃತ್ಯದ ನಂತರ ಮೃತದೇಹದ ಎದುರೇ ನಿಂತು ಸೆಲ್ಫಿ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ನಗರದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆಯಾದ ಯುವಕ ಹೂವಿನಗಳ್ಳಿ ಕಾವಲ್ ಗ್ರಾಮದ ನಿವಾಸಿ ಕೀರ್ತಿ (24). 

ಉಲ್ಲಾಸ್ ಎಂಬ ಯುವಕ ಕೊಲೆ ಮಾಡಿ ಶವದೊಂದಿಗೆ ಸೆಲ್ಫಿ ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ, “ನಾವು ಮರ್ಡರ್ ಹೊಡೆದಿದ್ದೇವೆ, ಇವನನ್ನು ಸಾಯಿಸಿದ್ದೇವೆ” ಎಂದು ಹೇಳುವ ಮೂಲಕ ಅವರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಈ ಕೃತ್ಯವು ಗಾಂಜಾ ನಶೆಯಲ್ಲಿ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಶವಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಕೊಲೆ ನಡೆದ ಸ್ಥಳ ಹಾಗೂ ಶವದ ಅನ್ವೇಷಣೆಯಲ್ಲಿ ಪೊಲೀಸರು ವಿಳಂಬ ಮಾಡಿದ್ದಾರೆ ಎಂಬ ಕಾರಣಕ್ಕೆ ಸಾರ್ವಜನಿಕರು ಪೊಲೀಸರ ಕಾರ್ಯ ವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣಾ ಪೊಲೀಸರು ಆರೋಪಿಗಳ ಪತ್ತೆ ಹಾಗೂ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ :“ಕೊರಗಜ್ಜ” ಸಿನಿಮಾದ ಶ್ರೇಯ ಘೋಷಾಲ್ ಹಾಡಿನ ಸಾಹಿತ್ಯ ಬಿಡುಗಡೆ! 

Btv Kannada
Author: Btv Kannada

Read More