ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೇಲೆ ಲೋಕಾಯುಕ್ತ ದಾಳಿ!

ಬೆಂಗಳೂರು : ಇಂದು ಬೆಳಂಬೆಳ್ಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೇಲೆ ದಾಳಿ ನಡೆಸಿದ್ದಾರೆ. ಅನೇಕ ದೂರುಗಳು ಮತ್ತು ಅಕ್ರಮ ಆರೋಪದ ಹಿನ್ನಲೆಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೇಲೆ ಲೋಕಾಯುಕ್ತ ರೇಡ್ ಮಾಡಿ ಪರಿಶೀಲನೆ ನಡೆಸುತ್ತಿದೆ.

ಲೋಕಾ ಎಸ್ಪಿ ಶಿವಪ್ರಕಾಶ್ ನೇತೃತ್ವದಲ್ಲಿ ವಸಂತನಗರ ಬಳಿಯಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ನಿಗಮದಲ್ಲಿ ಅಕ್ರಮಗಳು ನಡೆದಿದೆ ಎಂದು ಅನೇಕ ದೂರುಗಳು ಸಲ್ಲಿಕೆಯಾಗಿತ್ತು.

ದೂರುಗಳು ಬಂದ ಹಿನ್ನೆಲೆ ಇದೀಗ ಲೋಕಾಯುಕ್ತ ಅಧಿಕಾರಿಗಳು ಅಂಬೇಡ್ಕರ್ ಅಭಿವೃದ್ಧಿ ನಿಗಮ ಕಚೇರಿ ಮೇಲೆ ರೇಡ್ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಟಾಲಿವುಡ್ ನಟಿ ಹೇಮಾಗೆ ಬಿಗ್ ರಿಲೀಫ್ – ರೇವ್ ಪಾರ್ಟಿ ಡ್ರಗ್ಸ್ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್!

Btv Kannada
Author: Btv Kannada

Read More