ಬೆಂಗಳೂರು : ರೇವ್ ಪಾರ್ಟಿ ಕೇಸಲ್ಲಿ ಅರೆಸ್ಟ್ ಆಗಿದ್ದ ಟಾಲಿವುಡ್ ನಟಿ ಕೊಲ್ಲ ಹೇಮಾಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ನಟಿ ವಿರುದ್ಧದ ಡ್ರಗ್ಸ್ ಸೇವನೆ ಪ್ರಕರಣ ರದ್ದು ಮಾಡಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಮಹತ್ವದ ಆದೇಶ ಹೊರಡಿಸಿದೆ.

ಬೆಂಗಳೂರು ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಡ್ರಗ್ಸ್ ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಿಸಿಬಿ ಪೊಲೀಸರು ನಟಿಯನ್ನು ಬಂಧಿಸಿ, ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದರು. ತಮ್ಮ ವಿರುದ್ಧದ ಡ್ರಗ್ಸ್ ಸೇವನೆ ಆರೋಪದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ನಟಿ ಕೊಲ್ಲ ಹೇಮಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ನಟಿ ಹೇಮಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಏಕಸದಸ್ಯ ಪೀಠವು, ನಟಿ ವಿರುದ್ಧದ ಎಂಡಿಎಂಎ ಡ್ರಗ್ಸ್ ಸೇವನೆ ಪ್ರಕರಣವನ್ನು ರದ್ದುಗೊಳಿಸಿ ಆದೇಶ ನೀಡಿದೆ. ಈ ಮೂಲಕ ರೇವ್ ಪಾರ್ಟಿ ಕೇಸ್‌ನಿಂದ ನಟಿ ಕೊಲ್ಲ ಹೇಮಾಗೆ ಮುಕ್ತಿ ಸಿಕ್ಕಂತಾಗಿದೆ.
ಇದನ್ನೂ ಓದಿ : ನಟಿಯ ಕಿಡ್ನಾಪ್, ಲೈಂಗಿಕ ಕಿರುಕುಳ ಕೇಸ್ – ಮಲಯಾಳಂ ನಟ ದಿಲೀಪ್ ನಿರ್ದೋಷಿ ಎಂದು ಕೋರ್ಟ್ ತೀರ್ಪು!







