ಬೆಂಗಳೂರಲ್ಲಿ ಗ್ಯಾಸ್ ಗೀಸರ್ ಸೋರಿಕೆ.. ತಾಯಿ – ಮಗು ಸಾವು!

ಬೆಂಗಳೂರು : ಗ್ಯಾಸ್ ಗೀಸರ್ ಸೋರಿಕೆಯಿಂದ ತಾಯಿ – ಮಗು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ನಡೆದಿದೆ. ಚಾಂದಿನಿ(26), ಯುವಿ ಕಿರಣ್(4) ಮೃತ ದುರ್ದೈವಿಗಳು.
ನಿನ್ನೆ ಮಧ್ಯಾಹ್ನ ತಾಯಿ – ಮಗು ಸ್ನಾನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಸ್ನಾನಗೃಹದಲ್ಲಿ ಅಳವಡಿಸಲಾಗಿದ್ದ ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಡೈಆಕ್ಸೈಡ್ ಅನಿಲವು ಸೋರಿಕೆಯಾಗಿದ್ದು, ಇಬ್ಬರೂ ತೀವ್ರವಾಗಿ ಅಸ್ವಸ್ಥರಾಗಿದ್ದರು.
ಕೂಡಲೇ ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ತಾಯಿ ಮತ್ತು ಮಗು ರಾತ್ರಿ ವೇಳೆಗೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : 100 ಕೋಟಿ ಮೌಲ್ಯದ ಆಸ್ತಿ ಕಬಳಿಕೆಗೆ ಯತ್ನಿಸಿದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ – CIDಗೆ ವಹಿಸಲು ಅರ್ಜಿ.. ಸರ್ಕಾರಕ್ಕೆ ನೋಟಿಸ್!

Btv Kannada
Author: Btv Kannada

Read More