ನಿಯಂತ್ರಣ ತಪ್ಪಿ ಕಾಂಪೌಂಡ್​ಗೆ ಗುದ್ದಿದ ಕಾರು – ಚಾಲಕ ಪ್ರಾಣಾಪಾಯದಿಂದ ಪಾರು!

ಬೆಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಂಪೌಂಡ್​ಗೆ ಗುದ್ದಿದ್ದು, ಡಿಕ್ಕಿಯಾದ ರಭಸಕ್ಕೆ ಮರ್ಸಿಡಿಸ್ ಬೆನ್ಸ್ ಕಾರು ಸಂಪೂರ್ಣ ನಜ್ಜುಗುಜ್ಜಾದ ಘಟನೆ ಬಸವನಗುಡಿ ಸಂಚಾರ ಠಾಣಾ ವ್ಯಾಪ್ತಿಯ ವಾಸವಿ ರೋಡ್​ನಲ್ಲಿ ನಡೆದಿದೆ.

ಛತ್ತೀಸ್‌ಘಡ್ ನೋಂದಣಿಯ ಮರ್ಸಿಡಿಸ್ ಬೆನ್ಸ್ ಕಾರನ್ನು ಬೆಂಗಳೂರಿನ ನೇತಾಜಿ ನಗರ ನಿವಾಸಿಯಾದ ಪ್ರಣಯ್ ಜೈನ್ ಎಂಬಾತ ಚಲಾಯಿಸುತ್ತಿದ್ದ. ಕಾರು ಅತಿವೇಗದಲ್ಲಿ ಬಂದಿದ್ದು, ಚಾಲಕನಿಗೆ ನಿಯಂತ್ರಣ ಸಿಗದೆ ಕಾಂಪೌಂಡ್‌ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರು ಪಲ್ಟಿಯಾಗಿದೆ. ಅಪಘಾತ ಸಂಭವಿಸಿದ ವೇಳೆ ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅಪಘಾತದಿಂದ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಎರಡು ದ್ವಿಚಕ್ರ ವಾಹನಗಳು ಮತ್ತು ಒಂದು ಕಾರು ಜಖಂಗೊಂಡಿವೆ. ಚಾಲಕ ಡ್ರಿಂಕ್ ಅಂಡ್ ಡ್ರೈವ್ ಮಾಡಿರೋ ಶಂಕೆ ವ್ಯಕ್ತವಾಗಿದ್ದು, ಗಾಯಗೊಂಡಿದ್ದ ಚಾಲಕ ಪ್ರಣಯ್ ಜೈನ್‌ರನ್ನು ಪೊಲೀಸರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಬಸವನಗುಡಿ ಸಂಚಾರ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ – ರಾಜ್ಯ ಸರ್ಕಾರ ಕಟ್ಟಿಹಾಕಲು ವಿಪಕ್ಷಗಳು ಸಜ್ಜು!

Btv Kannada
Author: Btv Kannada

Read More