ದೂರದರ್ಶನ ಸಿನಿಮಾ ಖ್ಯಾತಿಯ ನಿರ್ದೇಶಕ ಸುಕೇಶ್ ಶೆಟ್ಟಿ ಅವರ ಎರಡನೇ ಪ್ರಯತ್ನ ಪೀಟರ್. ಟೈಟಲ್, ಹಾಡಿನ ಮೂಲಕ ಕುತೂಹಲ ಹೆಚ್ಚಿಸಿದ್ದ ಪೀಟರ್ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಎಲ್ಲೆಡೆ ಅದ್ಬುತ ಪ್ರಶಂಸೆ ಕಂಡಿತ್ತು, ಸಿನಿಮಾ ಮತ್ತು ತಂಡದ ಮೇಲಿನ ಭರವಸೆ ಈಗ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಸುಂದರಿ ಸುಂದರಿ ಎಂಬ ಗೀತೆಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದ್ದು, ಇದೀಗ ಥಿಂಕ್ ಮ್ಯೂಸಿಕ್ ಯೂಟ್ಯೂಬ್ನಲ್ಲಿ ಎರಡೇ ಹಾಡು “ತಾಯೇ ತಾಯೇ” ರಿಲೀಸ್ ಆಗಿದೆ.

ತಾಯೇ ತಾಯೇ ಹಾಡು ಐದು ಭಾಷೆಯಲ್ಲಿ ಬಿಡುಗಡೆಯಾಗಿದೆ. ತಾಯಿ ಮಗನ ಬಾಂಧವ್ಯದ ಈ ಗೀತೆಗೆ ಕನ್ನಡದಲ್ಲಿ ಸುಕೀರ್ತ್ ಶೆಟ್ಟಿ ಸಾಹಿತ್ಯ ಒದಗಿಸಿದ್ದು, ಮಲಯಾಳಂ ಹೊರತುಪಡಿಸಿ ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿತ್ವಿಕ್ ಮುರುಳಿಧರ್ ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ಧ್ವನಿಯಾಗಿದ್ದಾರೆ. ಹಿಂದಿ ಭಾಷೆಯಲ್ಲಿ ಕೂಡ ಈ ಹಾಡು ರಿಲೀಸ್ ಆಗಿರೋದು ವಿಶೇಷ, ಪ್ರತಿಷ್ಠಿತ ಇಷ್ಟರ್ ಮ್ಯೂಸಿಕ್ ಹಿಂದಿ ಹಾಡಿನ ರೈಟ್ಸ್ ತನ್ನದಾಗಿಸಿಕೊಂಡಿದೆ.
ಮಲಯಾಳಂನಲ್ಲಿ ರಿಲೀಸ್ ಆಗಿರುವ “ಥಾಯೇ ಥಾಯೇ” ಹಾಡನ್ನು ತುಡುರಮ್ ಖ್ಯಾತಿಯ ಗಾಯಕ ಗೋಕುಲ್ ಗೋಪಕುಮಾರ್ ಅವರು ಹಾಡಿದ್ದಾರೆ. ಗೀತರಚನೆಕಾರ ಸಿಜು ತುರಾವೂರ್ ಸಾಹಿತ್ಯ ಬರೆದಿದ್ದಾರೆ.

ಪೀಟರ್ ಸಿನಿಮಾದ ತಾಯೇ ತಾಯೇ ಹಾಡಿನ ಸ್ಟ್ರಿಂಗ್ ಆರ್ಕೆಸ್ಟ್ರೇಶನ್ ಯುರೋಪಿನ ಬುಡಾಪೆಸ್ಟ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ. ಕೆಡಿ ಸಿನಿಮಾದ ಹಾಡುಗಳು ಬಳಿಕ ಬುಡಾಪೆಸ್ಟ್ ನಲ್ಲಿ ಸ್ಟ್ರಿಂಗ್ ಆರ್ಕೆಸ್ಟ್ರೇಶನ್ ಮಾಡಿರುವುದು ಪೀಟರ್ ಚಿತ್ರಕ್ಕೆ ಅನ್ನೋದು ಮತ್ತೊಂದು ವಿಶೇಷ.
ಪೀಟರ್ ಸಿನಿಮಾದಲ್ಲಿ ರಾಜೇಶ್ ಧ್ರುವ, ಜಾನ್ವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ, ವರುಣ್ ಪಟೇಲ್, ದೀನಾ ಪೂಜಾರಿ, ಭರತ್ ತಾರಾಬಳಗದಲ್ಲಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ಚಿತ್ರ ನಿರ್ಮಿಸಿದ್ದಾರೆ.

ಚಿತ್ರವು ಸೆನ್ಸಿಟಿವ್ ಸಸ್ಪೆನ್ಸ್ ಡ್ರಾಮಾ ಕಥಾಹಂದರ ಹೊಂದಿದ್ದು, ಅದರಲ್ಲಿಯೂ ಮುಖ್ಯವಾಗಿ ಚೆಂಡೆ ಮೇಳದ ಕಂಟೆಂಟ್ ಚಿತ್ರದಲ್ಲಿದೆ. ಕೇರಳದಲ್ಲಿ 300 ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿರುವ ಚೆಂಡೆ ಮೇಳವನ್ನು ಪೀಟರ್ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ.
ಇದನ್ನೂ ಓದಿ : ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ!







