ಸಚಿವ ಎಂ.ಬಿ.ಪಾಟೀಲ್ ದಬ್ಬಾಳಿಕೆ ಮಾತುಗಳಿಗೆ ನಾನು ಹೆದರಲ್ಲ – ಶಾಸಕ H.T ಮಂಜು ಕಿಡಿ!

ಮಂಡ್ಯ : ಸಚಿವ ಎಂ.ಬಿ ಪಾಟೀಲ್ ದಬ್ಬಾಳಿಕೆ ಮಾತುಗಳಿಗೆ ನಾವು ಹೆದರುವುದಿಲ್ಲ, ನಾವು ಅವರಿಗೆ ಗೌರವ ನೀಡುತ್ತೇವೆ. ಗಂಧದ ಎಣ್ಣೆಯ 12 ಟೆಂಡರ್‌ಗಳಲ್ಲಿ 1700 ಕೋಟಿ ವ್ಯತ್ಯಾಸ ಆಗಿರೋ ಬಗ್ಗೆ ದಾಖಲಾತಿ‌ ನೀಡಿದ್ದೇನೆ, ಆದ್ರೆ ಯಾವುದೇ ತನಿಖೆ ಮಾಡಿಸದೇ ಜೈಲಿಗೆ ಹಾಕಿಸುತ್ತೇನೆ ಎಂದಿದ್ದಾರೆ ಎಂ.ಬಿ ಪಾಟೀಲ್. ಬೇಕಿದ್ದರೆ ನನ್ನ ಜೈಲಿಗೆ ಹಾಕಿಸಲಿ ಎಂದು ಕೆ.ಆರ್‌.ಪೇಟೆ ಶಾಸಕ ಹೆಚ್.ಟಿ.ಮಂಜು ಬಹಿರಂಗವಾಗಿ ಸವಾಲ್ ಹಾಕಿದ್ದಾರೆ.

ಈ ಬಗ್ಗೆ ಮಂಡ್ಯದಲ್ಲಿ ಹೆಚ್.ಟಿ.ಮಂಜು ಮಾತನಾಡಿ, ಮೈಸೂರ್ ಸ್ಯಾಂಡಲ್ ಕಂಪನಿ ಎಂಡಿ ಮೂಲಕ ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇನೆ, 37 ಪುಟಗಳ ದೂರು, 603 ಪುಟಗಳ ದಾಖಲಾತಿಗಳನ್ನ ಸಿಎಂ ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಆದ್ರೆ ಈವರೆಗೆ ಯಾವುದೇ ಉತ್ತರ ಬಂದಿಲ್ಲ, ಸಚಿವ ಎಂ.ಬಿ. ಪಾಟೀಲ್ ಅವ್ರು ಕೂಡ ನನ್ನ ಪತ್ರಕ್ಕೆ ಸ್ಪಂದಿಸಿಲ್ಲ ಎಂದಿದ್ದಾರೆ.

ಕಳೆದ ಸರ್ಕಾರದ 40% ಭ್ರಷ್ಟಾಚಾರ ಮಾಡಿದೆ ಎಂದು ಆರೋಪ ಮಾಡಿದ್ರು, ಆದ್ರೆ ಯಾರು ಅವರನ್ನ ತಿಹಾರ್ ಜೈಲಿಗೆ ಹಾಕಿಸಿದ್ರು? ಸಚಿವರು ಆದ್ರೆ ಎಂ.ಬಿ.ಪಾಟೀಲ್ ಅವರು ಏನ್ ಬೇಕಾದ್ರೂ ಮಾತನಾಡಬಹುದಾ? ಅವರ ಪದ ಬಳಕೆ, ನಡವಳಿಕೆ ತಿದ್ದಿಕೊಳ್ಳುವುದು ಉತ್ತಮ, ಇಲ್ಲವಾದ್ರೆ ನಾವು ಮಂಡ್ಯದವರು ಅವರಿಗಿಂತ ಹೆಚ್ಚಾಗಿ ನಾವು ಮಾತನಾಡಬೇಕಾಗುತ್ತದೆ‌.
1 ಕೆಜಿ ಗಂಧದ ಎಣ್ಣೆಗೆ 93 ಸಾವಿರ ಟೆಂಟರ್ ಮಾಡಿದ್ದಾರೆ, ಅದರ ಹಿಂದಿವ ವರ್ಷ 1.13 ಲಕ್ಷ ಟೆಂಡರ್ ಆಗಿದೆ. ಆದ್ರೆ 2.37 ಲಕ್ಷಕ್ಕೆ 1 ಕೆಜಿ ಗಂಧದ ಎಣ್ಣೆಯನ್ನ ಖರೀದಿ ಮಾಡಿದ್ದಾರೆ.
ಹೀಗಾಗಿ ಅದನ್ನ ನಾನು ಪ್ರಶ್ನೆ ಮಾಡಿದ್ದೇನೆ, ಸದನದಲ್ಲಿ ಈ ಬಗ್ಗೆ ಪ್ರಶ್ನೆ ಮಾಡುತ್ತೇವೆ, ಸರಿಯಾದ ಉತ್ತರ ಸಿಗದಿದ್ದಲ್ಲಿ ಮುಂದಿನ‌ ಹೋರಾಟ ಮಾಡುತ್ತೇವೆ ಎಂದು ಹೆಚ್.ಟಿ.ಮಂಜು ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ : ಬಹಿರಂಗವಾಗಿ ಆದಿಚುಂಚನಗಿರಿ ಶ್ರೀಗಳ ಬಳಿ ಕ್ಷಮೆಯಾಚಿಸಿದ ಹೆಚ್​ಡಿಕೆ!

Btv Kannada
Author: Btv Kannada

Read More