ಮಂಡ್ಯ : ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಬಂದಾಗ ಒಕ್ಕಲಿಗ ಮಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಡಿಸಿಎಂ ಡಿಕೆ ಶಿವಕುಮಾರ್ ಪರ ಮಾತಾಡಿದ್ರು. ಪಕ್ಷವನ್ನ ಅಧಿಕಾರಕ್ಕೆ ತರಲು ಕಷ್ಟಪಟ್ಟಿರುವ ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು ಎಂದಿದ್ರು. ಈ ಬಗ್ಗೆ ಮಾತಾಡಿದ್ದ ಹೆಚ್ಡಿ ಕುಮಾರಸ್ವಾಮಿ ಸ್ವಾಮೀಜಿಗಳು ರಾಜಕೀಯದ ಬಗ್ಗೆ ಮಾತಾಡಬಾರದು ಎಂದಿದ್ರು. ಇದೀಗ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಬಹಿರಂಗವಾಗಿ ನಿರ್ಮಲಾನಂದನಾಥ ಶ್ರೀಗಳ ಬಳಿ ಕ್ಷಮೆ ಕೇಳಿದ್ದಾರೆ.
ಮಂಡ್ಯದ ವಿ.ಸಿ.ಫಾರಂನ ಕೃಷಿ ಮೇಳದಲ್ಲಿ ಹೆಚ್ಡಿ ಕುಮಾರಸ್ವಾಮಿ ಮಾತನಾಡಿ, ನನ್ನಿಂದ ಸ್ವಾಮೀಜಿಗಳಿಗೆ ಅಪಚಾರ ಆಗಿದ್ರೆ ಸಾರ್ವಜನಿಕ ಕ್ಷಮೆ ಕೇಳುತ್ತೇನೆ, ನಿರ್ಮಲನಂದನಾಥ ಶ್ರೀಗಳಷ್ಟು ವಿದ್ಯಾವಂತರಾದ ಮತ್ತೊಬ್ಬ ಸ್ವಾಮೀಜಿ ಇಲ್ಲ. ಶ್ರೀಗಳಿಗೆ ಅಗೌರವ ಆಗಬಾರದು ಎಂದು ಅವರನ್ನು ಬಳಸಿಕೊಳ್ಳಬಾರದು ಎಂದಿದ್ದೆ. ನಾನು ಸ್ವಾಮೀಜಿಯವರಿಗೆ ಎಂದೂ ಅಗೌರವ ತೋರುವ ಕೆಲಸ ಮಾಡಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ.
ನಮ್ಮ ಹಾಗೂ ದೊಡ್ಡ ಸ್ವಾಮೀಜಿಗಳ ಸಂಬಂಧ ಹಲವರಿಗೆ ಗೊತ್ತಿಲ್ಲ, ಬಾಲಗಂಗಾಧರನಾಥ ಶ್ರೀಗಳು ಸಮಾಜದ ಗೌರವ ಉಳಿಸಲಿಕ್ಕೆ ಬೀದಿಗೆ ಬಂದವರು. ಹಿರಿಯ ಶ್ರೀಗಳಿಗೆ ದೇವೇಗೌಡರು ಸಿಎಂ ಆಗಲಿ ಎನ್ನುವುದು ಮನಸ್ಸಿನಲ್ಲಿತ್ತು, ನನ್ನನ್ನು ಕಂಡರೂ ಶ್ರೀಗಳಿಗೆ ತುಂಬಾ ಇಷ್ಟವಿತ್ತು ಎಂದು ಕೇಂದ್ರ ಸಚಿವ ಹೆಚ್ಡಿಕೆ ಹೇಳಿದ್ದಾರೆ.
ಇದನ್ನೂ ಓದಿ : ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿ ಸಾಗಾಟ – ಹಾವೇರಿಯಲ್ಲಿ ಬರೋಬ್ಬರಿ 545 ಚೀಲ ಅಕ್ಕಿ ವಶಕ್ಕೆ!







