ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿ ಸಾಗಾಟ – ಹಾವೇರಿಯಲ್ಲಿ ಬರೋಬ್ಬರಿ 545 ಚೀಲ ಅಕ್ಕಿ ವಶಕ್ಕೆ!

ಹಾವೇರಿ : ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿ ಸಾಗಾಟ ಮಾಡ್ತಿದ್ದ ಘಟನೆ ಹಾವೇರಿಯ ಬಂಕಾಪೂರದಲ್ಲಿ ನಡೆದಿದೆ. ಶಿಗ್ಗಾವಿ ತಹಶೀಲ್ದಾರ್​​ & ಆಹಾರ ನೀರಿಕ್ಷರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದಾಗ ಬರೋಬ್ಬರಿ 545 ಚೀಲಗಳ ಅನ್ನಭಾಗ್ಯದ ಅಕ್ಕಿ ಪತ್ತೆಯಾಗಿದ್ದು, 545 ಚೀಲಗಳ ಅನ್ನಭಾಗ್ಯದ ಅಕ್ಕಿ ಸಮೇತವಾಗಿ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

ಹತ್ತಿ ಜೀನ್​​ನಲ್ಲಿ ಬಡವರ ಅನ್ನಭಾಗ್ಯದ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು. ಜೈನುದ್ದೀನ್​​​​ ಮತ್ತು ಸೈಯದ್​​ ಶಬ್ಬೀರ್​​ ಎಂಬುವವರು ಅಕ್ಕಿ ಸಾಗಾಟ ಮಾಡಿದ್ದು, ಬಂಕಾಪೂರದಿಂದ ಮಹಾರಾಷ್ಟ್ರ ಸಪ್ಲೈ ಮಾಡಲು ಅಕ್ಕಿಯನ್ನು ಲೋಡ್ ಮಾಡಿಟ್ಟಿದ್ದರು. ಶಿಗ್ಗಾವಿ ತಹಶೀಲ್ದಾರ್​​ & ಆಹಾರ ನೀರಿಕ್ಷರ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು, ಈ ವೇಳೆ 545 ಚೀಲಗಳಲ್ಲಿ ಅಕ್ಕಿ ಸಾಗಾಟ ಮಾಡ್ತಿದ್ದ ಬೃಹತ್ ಲಾರಿಯನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಹತ್ತಿ ಜೀನ್ ನಲ್ಲೇ ದಂಧೆಕೋರರು ಅಕ್ಕಿ ಪಾಲೀಶ್ ಯಂತ್ರಗಳನ್ನ ಹೊಂದಿದ್ದ. ಹಳ್ಳಿಗಳಲ್ಲಿ ಜನರಿಂದ ಸಂಗ್ರಹವಾಗುವ ಅಂಗಡಿಗಳ ಮೂಲಕ ಅಕ್ಕಿ ಸಂಗ್ರಹ ಮಾಡ್ತಿದ್ದರು. ಈ ಸಂಬಂಧ
ಬಂಕಾಪೂರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮಕ್ಕಳಾಗಿಲ್ಲ ಎಂಬ ಕೊರಗಿನಿಂದ ಉಪನ್ಯಾಸಕ ಆತ್ಮಹತ್ಯೆ!

Btv Kannada
Author: Btv Kannada

Read More