ಮಕ್ಕಳಾಗಿಲ್ಲ ಎಂಬ ಕೊರಗಿನಿಂದ ಉಪನ್ಯಾಸಕ ಆತ್ಮಹತ್ಯೆ!

ಬೆಂಗಳೂರು : ಮಕ್ಕಳಾಗಿಲ್ಲ ಎಂಬ ಕೊರಗಿನಿಂದ ಕಾಲೇಜು ಉಪನ್ಯಾಸಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬಸವನಗುಡಿಯ ರತ್ನವಿಲಾಸ ರಸ್ತೆಯಲ್ಲಿ ನಡೆದಿದೆ. ಆಂಧ್ರ ಪ್ರದೇಶ ಮೂಲದ ಮೂಗ ಗೋಪಿ (32) ನೇಣಿಗೆ ಶರಣಾದ ಉಪನ್ಯಾಸಕ.

MSC ಮ್ಯಾಥಮೆಟಿಕ್ಸ್​​ನಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದ ಗೋಪಿ ಜಯನಗರದ ಅಲೆನ್ ಯೂನಿವರ್ಸಿಟಿಯಲ್ಲಿ ಲೆಕ್ಚರರ್ ಆಗಿದ್ದ. 2020ರಲ್ಲಿ ಗೋಪಿ, ಅಂಕಮ್ಮ ಎಂಬುವವರನ್ನು ಮದುವೆಯಾಗಿದ್ದ. ಮದುವೆಯಾಗಿ 5 ವರ್ಷಗಳಾದರೂ ಮಕ್ಕಳಾಗಿರಲಿಲ್ಲ ಎಂಬ ಕೊರಗು ಇತ್ತು. ಮಕ್ಕಳು ಆಗದ ವಿಚಾರಕ್ಕೆ ಖಿನ್ನತೆಗೊಳಗಾಗಿದ್ದ ಲೆಕ್ಚರರ್ ಮೂಗ ಗೋಪಿ ನಿನ್ನೆ ಪತ್ನಿ ಅಂಕಮ್ಮ ಜೊತೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ.

ಗಲಾಟೆಯಲ್ಲಿ ಗೋಪಿ ಅಂಕಮ್ಮನಿಗೆ ಒಂದೆರಡು ಏಟು ಹೊಡೆದಿದ್ದನಂತೆ. ಬಳಿಕ ರೂಂಗೆ ತೆರಳಿ ಉಪನ್ಯಾಸಕ ಗೋಪಿ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಚಿಕ್ಕೋಡಿ : ಮಿಡ್​​ನೈಟ್​ನಲ್ಲಿ​ ಪೊಲೀಸರ ಮೇಲೆಯೇ ದರೋಡೆಕೋರರ ಅಟ್ಯಾಕ್!

Btv Kannada
Author: Btv Kannada

Read More