ಜೈಲಿನಲ್ಲಿ ಮಾದಕ ವಸ್ತುಗಳಿಗಾಗಿ ಕಾದಾಟ – ಜೈಲರ್ ಸೇರಿ 3 ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕೈದಿಗಳು!

ಕಾರವಾರ : ಮಾದಕ ವಸ್ತುಗಳನ್ನು ನಿರ್ಬಂಧಿಸಿದ್ದಕ್ಕೆ ಕೈದಿಗಳು ಜೈಲರ್‌ ಸೇರಿದಂತೆ ಮೂವರು ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ಮಂಗಳೂರು ಮೂಲದ ರೌಡಿಗಳಾದ ಮೊಹಮ್ಮದ್ ಅಬ್ದುಲ್ ಫಯಾನ್, ಕೌಶಿಕ ನಿಹಾಲ್​ ಸೇರಿಕೊಂಡು ಜೈಲರ್​ ಕಲ್ಲಪ್ಪ ಗಸ್ತಿ ಸೇರಿದಂತೆ ಮೂವರು ಸಿಬ್ಬಂದಿಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ. ಸಿಬ್ಬಂದಿ ಹಾಗೂ ಜೈಲರ್ ಬಟ್ಟೆ ಹರಿದು ಆರೋಪಿಗಳು ಹಲ್ಲೆ ಮಾಡಿದ್ದು, ಗಾಯಗೊಂಡ ಜೈಲರ್ & ಸಿಬ್ಬಂದಿಗಳನ್ನು ಕಾರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮೊಹ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ ನಿಹಾಲ್ ಆರೋಪಿಗಳಾಗಿದ್ದಾರೆ. ಮಂಗಳೂರು ಜೈಲಿನಲ್ಲಿ ಹೆಚ್ಚುವರಿಯಾಗಿದ್ದ ಆರೋಪಿಗಳನ್ನು ಕಾರವಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಕಳೆದ ಕೆಲ ದಿನಗಳಿಂದ ಮಾದಕ ಪದಾರ್ಥಗಳನ್ನು ಸಂಪೂರ್ಣವಾಗಿ ಜೈಲಲ್ಲಿ ನಿರ್ಬಂಧಿಸಲಾಗಿತ್ತು. ಈ ಹಿನ್ನೆಲೆ ಜೈಲರ್ ಜೊತೆ ಗಲಾಟೆ ಮಾಡಿದ್ರು ಕೂಡ ನಶೆ ವಸ್ತು ಸಿಗದಿದ್ದಕ್ಕೆ ಕೈದಿಗಳು ಗಲಾಟೆ ಮಾಡಿದ್ದಾರೆ. ನಶೆ ಏರಿಸೋ ಪದಾರ್ಥಗಳಿಗಾಗಿ ಮಾರಾಮಾರಿಗೆ ಇಳಿದ ಕೈದಿಗಳ ವಿಡಿಯೋ ವೈರಲ್ ವೈರಲ್ ಆಗಿದೆ.

ಇದನ್ನೂ ಓದಿ : ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ – ಡೆಲಿವರಿ ಬಾಯ್​ಗೆ ಮಿಡ್ಲ್​​ ಫಿಂಗರ್ ತೋರಿಸಿದ ಸೆಕ್ಯೂರಿಟಿ ಗಾರ್ಡ್!

Btv Kannada
Author: Btv Kannada

Read More