ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ – ಡೆಲಿವರಿ ಬಾಯ್​ಗೆ ಮಿಡ್ಲ್​​ ಫಿಂಗರ್ ತೋರಿಸಿದ ಸೆಕ್ಯೂರಿಟಿ ಗಾರ್ಡ್!

ಬೆಂಗಳೂರು : ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮಿಡ್ಲ್​​ ಫಿಂಗರ್ ಕೇಸ್ ಮಾಸೋ ಮುನ್ನವೇ ಬೆಂಗಳೂರಲ್ಲಿ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ನಗರದ ಕೆ.ಎಸ್. ಲೇಔಟ್ ವ್ಯಾಪ್ತಿಯಲ್ಲಿ ಒಬ್ಬ ಸೆಕ್ಯೂರಿಟಿ ಗಾರ್ಡ್ ಡೆಲಿವರಿ ಬಾಯ್‌ಗೆ ಮಿಡಲ್ ಫಿಂಗರ್ ತೋರಿಸಿ ಅಸಭ್ಯವಾಗಿ ವರ್ತಿಸಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ಮಂಗಳವಾರದಂದು ಡೆಲಿವರಿ ಬಾಯ್ ಒಬ್ಬ ಖಾಸಗಿ ಅಪಾರ್ಟ್‌ಮೆಂಟ್‌ಗೆ ಡೆಲಿವರಿ ನೀಡಲು ಹೋಗಿದ್ದ. ಈ ವೇಳೆ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಸೆಕ್ಯೂರಿಟಿ ಗಾರ್ಡ್ ಜೊತೆ ಡೆಲಿವರಿ ಬಾಯ್​​ಗೆ ಕಿರಿಕ್ ನಡೆದಿದೆ. ಕನ್ನಡದಲ್ಲಿ ಮಾತಾಡಿದ್ದ ಡೆಲಿವರಿ ಬಾಯ್ ಜೊತೆ ಹಿಂದಿ ಸೆಕ್ಯೂರಿಟಿ ಗಲಾಟೆ ಮಾಡಿದ್ದಾನೆ.

ಕಿರಿಕ್ ಮಧ್ಯೆ ಮಿಡ್ಲ್​​ ಫಿಂಗರ್ ತೋರಿಸಿ ಸೆಕ್ಯೂರಿಟಿ ಗಾರ್ಡ್ ಅಸಭ್ಯವಾಗಿ ವರ್ತಿಸಿದ್ದು, ಸೆಕ್ಯೂರಿಟಿ ಗಾರ್ಡ್‌ನ ಈ ದುರ್ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಂಘಟನೆಯೊಂದರ ಸದಸ್ಯರು ಕೆ.ಎಸ್.ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನ ಅನ್ವಯ ಪೊಲೀಸರು NCR ದಾಖಲಿಸಿಕೊಂಡಿದ್ದಾರೆ. ಭಯದಿಂದ ಎಸ್ಕೇಪ್ ಆಗಿರೋ ಸೆಕ್ಯೂರಿಟಿ ಗಾರ್ಡ್​ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇನ್ನು ಸೆಕ್ಯೂರಿಟಿ ಗಾರ್ಡ್‌ನ ದುರ್ವರ್ತನೆ ಹಿನ್ನೆಲೆಯಲ್ಲಿ ಆತನನ್ನು ಕರೆಸಿ, ಡೆಲಿವರಿ ಬಾಯ್‌ಗೆ ಕ್ಷಮೆ ಕೇಳಿಸಬೇಕೆಂದು ಸಂಘಟನೆಯ ಸದಸ್ಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಇಂದಿನಿಂದಲೇ ದರ್ಶನ್ ಅಭಿನಯದ ‘ದಿ ಡೆವಿಲ್’ ಅಡ್ವಾನ್ಸ್ ಬುಕ್ಕಿಂಗ್ ಶುರು!

Btv Kannada
Author: Btv Kannada

Read More