ನಟ ದರ್ಶನ್‌ ಬೆನ್ನುನೋವು ನಾಟಕ ಬಯಲು? ವೈದ್ಯರು ಹೇಳಿದ್ದೇನು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್​ನ ಮತ್ತೊಂದು ನಾಟಕ ಇದೀಗ ಬಯಲಾಗಿದೆ. ಚಿಕಿತ್ಸೆಗಾಗಿ ಜೈಲಾಧಿಕಾರಿಗಳ ಮೂಲಕ ಒದಗಿಸಲಾದ ವೈದ್ಯಕೀಯ ತಂಡದ ಪರಿಶೀಲನೆ ವೇಳೆ ದರ್ಶನ್‌ಗೆ ಬೆನ್ನುನೋವು ಇಲ್ಲದಿರುವುದು ದೃಢಪಟ್ಟಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​ ತನಿಖೆ ನಡೆಯುತ್ತಿದ್ದಾಗ ನಟ ದರ್ಶನ್ ತೀವ್ರ ಬೆನ್ನುನೋವು ಇದೆ, ‘ನಿಲ್ಲೋಕು ಆಗ್ತಿಲ್ಲ ಕೂರೋಕು ಆಗ್ತಿಲ್ಲ’ ಎಂದು ಹೇಳಿ ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ಅವಕಾಶ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ಮನವಿಯ ಮೇರೆಗೆ ನ್ಯಾಯಾಲಯವು ಕೂಡ ಜೈಲಾಧಿಕಾರಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಸೂಚನೆ ನೀಡಿತ್ತು.

ಕೋರ್ಟ್ ಸೂಚನೆ ಮೇರೆಗೆ, ಸಿ.ವಿ. ರಾಮನ್ ಆಸ್ಪತ್ರೆಯ ನಾಲ್ವರು ವೈದ್ಯರ ತಂಡವನ್ನು ಜೈಲಾಧಿಕಾರಿಗಳು ನಿಯೋಜಿಸಿದ್ದರು. ಈ ತಂಡವು ದರ್ಶನ್‌ಗೆ ಫಿಸಿಯೋಥೆರಪಿ (Physiotherapy) ಚಿಕಿತ್ಸೆಯನ್ನು ಆರಂಭಿಸಿತ್ತು. ಮೊದಲಿಗೆ ವಾರಕ್ಕೆ ಎರಡು ಅಥವಾ ಮೂರು ಬಾರಿ ಫಿಸಿಯೋಥೆರಪಿ ನಡೆಸಲು ಮುಂದಾಗಿತ್ತು. ಆದರೆ, ಫಿಸಿಯೋಥೆರಪಿಯ ಮೊದಲ ವಾರದಲ್ಲೇ ದರ್ಶನ್ ಅವರ ಬೆನ್ನುನೋವಿನ ‘ನಾಟಕ’ ಬಯಲಾಗಿದೆ.

ವೈದ್ಯರು ಪರಿಶೀಲನೆ ನಡೆಸಿದಾಗ ದರ್ಶನ್ ಅವರು ಆರೋಪಿಸಿದಷ್ಟು ತೀವ್ರವಾದ ಬೆನ್ನು ನೋವು ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ವೈದ್ಯರು ಫಿಜಿಯೋ ಥೆರಫಿ ಮಾಡೋದನ್ನೇ ನಿಲ್ಲಿಸಿದ್ದು,
ನಟ ದರ್ಶನ್​ಗೆ ಫಿಜಿಯೋ ಅವಶ್ಯಕತೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ : ಪೊಲೀಸರೇ ಅಪರಾಧ ಪ್ರಕರಣಗಳಲ್ಲಿ ಶಾಮೀಲು – ಹಿರಿಯ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ DG-IGP ಸಲೀಂ!

Btv Kannada
Author: Btv Kannada

Read More