ರಾಟ್ವೀಲರ್ ಜಾತಿಯ ನಾಯಿಗಳ ಭೀಕರ ದಾಳಿಗೆ ಮಹಿಳೆ ಬಲಿ – ದಾವಣಗೆರೆಯಲ್ಲಿ ರಾಟ್ವೀಲರ್ ಜಾತಿ ನಾಯಿಗಳ ರೌದ್ರಾವತಾರ!

ದಾವಣಗೆರೆ : ಜಿಲ್ಲೆಯ ಹೊರವಲಯದಲ್ಲಿ ನೆಲೆಸಿರುವ ಗೊಲ್ಲರಹಟ್ಟಿ ಮತ್ತು ಮಲ್ಲಶೆಟ್ಟಿಹಳ್ಳಿ ಗ್ರಾಮಗಳ ನಡುವಿನ ರಸ್ತೆಯಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಮಾಲೀಕರು ನಡು ರಸ್ತೆಯಲ್ಲಿ ಬಿಟ್ಟು ಹೋಗಿದ್ದ ಎರಡು ರೊಟ್ವೀ ಲರ್ (Rottweiler) ಜಾತಿಯ ನಾಯಿಗಳ ದಾಳಿಯಿಂದಾಗಿ 38 ವರ್ಷದ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.

ಮಲ್ಲಶೆಟ್ಟಿಹಳ್ಳಿಯ ನಿವಾಸಿ, 38 ವರ್ಷದ ಅನಿತಾ ಅವರು ನಿನ್ನೆ ರಾತ್ರಿ ಸುಮಾರು 11:30ರ ಸುಮಾರಿಗೆ ದಾವಣಗೆರೆ ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿ ರಸ್ತೆಯಲ್ಲಿ ಘಟನೆ ನಡೆದಿದೆ. ತಮ್ಮ ಮಕ್ಕಳೊಂದಿಗೆ ಜಗಳವಾಡಿ ತವರುಮನೆ ವಡ್ಡನಹಳ್ಳಿಗೆ ಹೊರಟಿದ್ದರು. ದಾರಿಯಲ್ಲಿ ಎರಡು ರೊಟ್ವೀ ಲರ್ ನಾಯಿಗಳು ಏಕಾಏಕಿ ದಾಳಿ ಮಾಡಿ, ಅವರನ್ನು ಸುಮಾರು 50ಕ್ಕೂ ಹೆಚ್ಚು ಕಡೆಗಳಲ್ಲಿ ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ.

ರಾತ್ರಿ ನಡೆದ ಘಟನೆ ಗ್ರಾಮಸ್ಥರಿಗೆ ಬೆಳಗಿನ ಜಾವ 3:30ಕ್ಕೆ ತಿಳಿದುಬಂದಿದೆ. ತೀವ್ರವಾಗಿ ಗಾಯಗೊಂಡಿದ್ದ ಅನಿತಾ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ತುಮಕೂರು ಜಿಲ್ಲೆಯ ಶಿರಾ ಬಳಿ ಅವರು ಕೊನೆಯುಸಿರೆಳೆದರು. ತಮ್ಮ ಗ್ರಾಮದ ಮಹಿಳೆಯ ಅಮಾನುಷ ಸಾವಿನಿಂದಾಗಿ ಗೊಲ್ಲರಹಟ್ಟಿ ಮತ್ತು ಮಲ್ಲಶೆಟ್ಟಿಹಳ್ಳಿಯ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದಾರೆ.

ಘಟನೆ ನಂತರ, ಗ್ರಾಮಸ್ಥರು ದಾಳಿ ನಡೆಸಿದ ನಾಯಿಗಳನ್ನು ಹಿಡಿದು, ಹಗ್ಗ ಕಟ್ಟಿ, ಕೋಲಿಗೆ ಎಳೆದುಕೊಂಡು ಹೋಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮಾಲೀಕರ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ಮೃತದೇಹವನ್ನು ಶಿರಾದ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದ ಬಳಿಕ ದಾವಣಗೆರೆಗೆ ತರಲಾಗುತ್ತದೆ. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : “ದಾಸೋಹ ಚಕ್ರವರ್ತಿ” ಅನ್ನದಾನೇಶ್ವರ ಸ್ವಾಮೀಜಿ ಲಿಂಗೈಕ್ಯ – ಅನಾರೋಗ್ಯದಿಂದ ನಿಧನ.. ನಾಳೆ ಅಂತ್ಯ ಕ್ರಿಯೆ!

Btv Kannada
Author: Btv Kannada

Read More