ಬೆಂಗಳೂರು ಪೊಲೀಸ್ ಆಯುಕ್ತರನ್ನು ಬಿಡದ‌ ಸೈಬರ್ ಖದೀಮರು – ಬಿ.ದಯಾನಂದ್​ ಹೆಸ್ರಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್ ಓಪನ್!

ಬೆಂಗಳೂರು : ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಫೇಕ್​ ಅಕೌಂಟ್ ಕ್ರಿಯೇಟ್ ಮಾಡಿ ಹಣ ಪೀಕುವವರ ಸಂಖ್ಯೆ ಈಗೀಗ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಫೇಸ್‌ಬುಕ್‌ಗಳಲ್ಲಿ ನಿಮಗೂ ಅಂತಹ ನಕಲಿ ಅಕೌಂಟ್‌ಗಳಿಂದ ಮೆಸೇಜ್‌ಗಳು ಬಂದಿರುತ್ತವೆ. ಇದೀಗ ಕಿರಾತಕನೋರ್ವ ಬೆಂಗಳೂರು ನಗರ ಪೊಲೀಸ್ ಕಮೀಷನರ್‌ ಬಿ.ದಯಾನಂದ್ ಅವರ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದಿದ್ದಾನೆ. ಜನಸಾಮಾನ್ಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವ ಮೂಲಕ ವಂಚನೆಗೆ ಯತ್ನಿಸುತ್ತಿದ್ದಾರೆ ಎಂಬ  ಮಾಹಿತಿ ಬೆಳಕಿಗೆ ಬಂದಿದೆ. ಇದೀಗ ಆ ಫೇಕ್​ ಅಕೌಂಟ್ ಸ್ಕ್ರೀನ್‌ಶಾಟ್‌ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರ ಹೆಸರಿನಲ್ಲಿ ತೆರೆಯಲಾಗಿರುವ ಈ ನಕಲಿ ಫೇಸ್‌ಬುಕ್ ಖಾತೆಯು ಹಿಂದಿ ಭಾಷೆಯಲ್ಲಿದೆ. ಈ ಖಾತೆಯ ಮೂಲಕ ಖದೀಮರು, ಸಾಮಾನ್ಯ ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ. ಒಂದು ವೇಳೆ ಈ ರಿಕ್ವೆಸ್ಟ್‌ಗಳನ್ನು ಸ್ವೀಕರಿಸಿದರೆ, ವಂಚಕರು ವೈಯಕ್ತಿಕ ಮಾಹಿತಿಯನ್ನು ಕದಿಯುವ ಅಥವಾ ಹಣಕಾಸಿನ ವಂಚನೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. ಈ ಖಾತೆಯಿಂದ ಕಳುಹಿಸಲಾಗುವ ಸಂದೇಶಗಳು ಅಥವಾ ರಿಕ್ವೆಸ್ಟ್‌ಗಳು ಆಯುಕ್ತರಿಂದ ಬಂದಿರುವಂತೆ ತೋರಿಸುವಂತೆ ರಚಿತವಾಗಿವೆ, ಇದು ಜನರಲ್ಲಿ ಗೊಂದಲವನ್ನುಂಟು ಮಾಡುತ್ತಿದೆ.

ಈ ನಕಲಿ ಖಾತೆಯ ಚಿತ್ರಗಳು ಮತ್ತು ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿವೆ. ನಕಲಿ ಖಾತೆಯ ಸ್ಕ್ರೀನ್‌ಶಾಟ್‌ಗಳು ಹಾಗೂ ಇದರಿಂದ ಕಳುಹಿಸಲಾದ ರಿಕ್ವೆಸ್ಟ್‌ಗಳು ಜನರ ಗಮನ ಸೆಳೆದಿದ್ದು, ಸೈಬರ್ ಅಪರಾಧಿಗಳ ಧೈರ್ಯಕ್ಕೆ ಅನೇಕರು ಶಾಕ್ ಆಗಿದ್ದಾರೆ. ನಗರದ ಪೊಲೀಸ್ ಆಯುಕ್ತರ ಹೆಸರಿನಲ್ಲೇ ಇಂತಹ ಕೃತ್ಯ ನಡೆಯುತ್ತಿದ್ದರೆ, ಸಾಮಾನ್ಯ ಜನರ ಸ್ಥಿತಿ ಏನು? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.

ಇದನ್ನೂ ಓದಿ : ಏ.17ರಂದು ಕೇಂದ್ರ ಸರ್ಕಾರದ ವಿರುದ್ಧ ನಾವೂ ಜನಾಕ್ರೋಶ ಯಾತ್ರೆ ಮಾಡ್ತೇವೆ – ಬಿಜೆಪಿಗೆ ಡಿಕೆಶಿ ಕೌಂಟರ್!

Btv Kannada
Author: Btv Kannada

Read More