ಬೆಂಗಳೂರು : ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ NIA ಟೀಂ ಹೈ ಅಲರ್ಟ್ ಆಗಿದೆ. ರಾಷ್ಟ್ರೀಯ ತನಿಖಾ ದಳ (NIA) ಮತ್ತೊಮ್ಮೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ತನಿಖೆಯನ್ನು ತೀವ್ರಗೊಳಿಸಿದೆ.

ಶಂಕಿತ ಉಗ್ರನೋರ್ವ ಜೈಲಿನಲ್ಲಿ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿದ್ದ. ಈ ಬೆನ್ನಲ್ಲೇ NIA ಅಲರ್ಟ್ ಆಗಿದೆ. ಈಗಾಗಲೇ NIA ತಂಡ ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಕೈಯಲ್ಲಿ ಮೊಬೈಲ್ ಹಿಡಿದುಕೊಂಡಿದ್ದ ಶಂಕಿತ ಜುಹಾದ್ ಹಮೀದ್ ಶಕೀಲ್ನ್ನು ವಿಚಾರಣೆ ಮಾಡಿದ್ದಾರೆ. ಶಂಕಿತ ಉಗ್ರನ ಕೈಯಲ್ಲಿ ಪತ್ತೆಯಾದ ಮೊಬೈಲ್ ಅನ್ನು ವಶಪಡಿಸಿಕೊಂಡು ಎನ್ಐಎ ತಂಡವು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ.

ಇನ್ನು ಜೈಲಿನಲ್ಲಿದ್ದುಕೊಂಡು ಈತ ಯಾರ್ಯಾರನ್ನು ಸಂಪರ್ಕಿಸಿದ್ದಾನೆ, ಯಾವೆಲ್ಲಾ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡಿದ್ದಾನೆ ಎಂಬ ಬಗ್ಗೆ ಎನ್ಐಎ ಮಾಹಿತಿ ಕಲೆಹಾಕಿದೆ. ದೆಹಲಿಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೂ ಈತನಿಗೂ ಏನಾದರೂ ಸಂಬಂಧವಿದೆಯೇ ಎಂಬ ಆಯಾಮದಲ್ಲಿಯೂ NIA ತಂಡ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ : ಕರ್ತವ್ಯ ಲೋಪ ಎಸಗಿದ್ದ ನಾಲ್ವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್!







