ಕರ್ತವ್ಯ ಲೋಪ ಎಸಗಿದ್ದ ನಾಲ್ವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್!

ಬೆಂಗಳೂರು : ಕರ್ತವ್ಯ ಲೋಪ ಎಸಗಿದ್ದ ಆರೋಪದಡಿ ನಾಲ್ವರು ಪೊಲೀಸ್ ಸಿಬ್ಬಂದಿಗಳನ್ನು ಸಸ್ಪೆಂಡ್​ ಮಾಡಲಾಗಿದೆ. ನಂದಿನಿ ಲೇಔಟ್ ಠಾಣೆ ASI ಶ್ರೀನಿವಾಸ್ ಮೂರ್ತಿ, ಸುಬ್ರಹ್ಮಣ್ಯ ನಗರ ಠಾಣೆಯ ASI ಜಯರಾಮೇಗೌಡ, ಹೆಡ್ ಕಾನ್ಸ್​ಟೇಬಲ್ ಧರ್ಮ ಹಾಗೂ ಕಾನ್ಸ್​ಟೇಬಲ್ ನಜೀರ್ ಅನ್ನು ಅಮಾನತು ಮಾಡಿ ಉತ್ತರ ವಿಭಾಗದ DCP ನೇಮಗೌಡ ಅವರು ಆದೇಶ ಹೊರಡಿಸಿದ್ದಾರೆ.

ದೂರು ನೀಡಲು ಬಂದ ವ್ಯಕ್ತಿಯ ದೂರು ಪರಿಗಣಿಸದೇ ನಿರ್ಲಕ್ಷ್ಯ ತೋರಿದ್ದ ಆರೋಪದ ಮೇಲೆ ಈ ನಾಲ್ವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದೆ. ನಂದಿನಿ ಲೇಔಟ್ ಠಾಣೆ ಎಎಸ್ಐ ಶ್ರೀನಿವಾಸ ಮೂರ್ತಿ ವಿರುದ್ಧ ನಿತ್ಯಾನಂದ ಎಂಬುವವರಿಂದ ದೂರು ಪಡೆಯದೇ ಸರಿಯಾಗಿ ಸ್ಪಂದಿಸದ ಆರೋಪ ಕೇಳಿಬಂದಿದೆ. ಈ ಬಗ್ಗೆ ದೂರುದಾರ ನಿತ್ಯಾನಂದ ಟ್ವಿಟರ್​ನಲ್ಲಿ ಪೊಲೀಸರ ವರ್ತನೆ ಬಗ್ಗೆ ಪೋಸ್ಟ್ ಮಾಡಿದ್ದ.

ದೂರು ಬೆನ್ನಲ್ಲೇ ASI ಶ್ರೀನಿವಾಸ ಮೂರ್ತಿ ಅಮಾನತುಗೊಳಿಸಿ DCP ನೇಮಗೌಡ ಆದೇಶ ಹೊರಡಿಸಿದ್ದಾರೆ. ಅವರು ಸರಿಯಾದ ಸಮಯಕ್ಕೆ ಅಗತ್ಯವಿರುವ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸದೇ ನಿರ್ಲಕ್ಷ್ಯ ತೋರಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ : RTI ದಂಧೆ.. Plan violation ಹೆಸರಿನಲ್ಲಿ ಜೀವ ತೆಗೆಯುತ್ತಿರುವ ಕಿರಾತಕರ ಸಂಚಿಗೆ ಬಲಿಯಾದ ಟೆಕ್ಕಿ – ಮನೆ & ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟುವವರು ಈ ಸ್ಟೋರಿ ಓದಿ!

Btv Kannada
Author: Btv Kannada

Read More