ಮಂಗಳೂರು : ENT ಕ್ಲಿನಿಕ್ಗೆ ನುಗ್ಗಿ ಸಿಬ್ಬಂದಿ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆಯಲ್ಲಿ ನಡೆದಿದೆ. ಸಿಬ್ಬಂದಿ ಹಲ್ಲೆ ಮೇಲೆ ಮಾಡಿ ಗ್ಲಾಸ್ ಪುಡಿಗೈದು ದಾಂಧಲೆ ನಡೆಸಿದ್ದಾನೆ.

ಪುತ್ತೂರಿನ ಡಾ.ರಾಮಮೋಹನ್ ರಾವ್ ಕ್ಲಿನಿಕ್ಗೆ ನುಗ್ಗಿ ವ್ಯಕ್ತಿ ಹಲ್ಲೆಗೈದಿದ್ದಾನೆ. ಇಬ್ರಾಹಿಂ ಎಂಬಾತ ತನ್ನ ಪರಿಚಯಸ್ಥರನ್ನ ಬೇಗ ಒಳಗಡೆ ಬಿಟ್ಟಿಲ್ಲ ಎಂಬ ಕಾರಣಕ್ಕೆ ಕ್ಲಿನಿಕ್ ಸಿಬ್ಬಂದಿ ಶ್ರೀಕಾಂತ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾನೆ.

ಹಲ್ಲೆ ಬಳಿಕ ರೋಗಿಗಳಿಗೆ ಭಯ ಹುಟ್ಟಿಸಿ, ಇಬ್ರಾಹಿಂ ಅವಾಚ್ಯವಾಗಿ ಬೈದಿದ್ದಾನೆ. ಹಲ್ಲೆಗೈದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಗಿಲ್ಲಿ ನಟ ನಾಯಕನಾಗಿ ನಟಿಸಿರೋ ‘ಸೂಪರ್ ಹಿಟ್’ ಟೀಸರ್ ರಿಲೀಸ್!
Author: Btv Kannada
Post Views: 220







