ಕೆಂಪೇಗೌಡ ಏರ್‌ಪೋರ್ಟ್ ಆವರಣದಲ್ಲಿ ಸರಣಿ ಅಪಘಾತ – ಹಲವು ಕಾರುಗಳು ಜಖಂ!

ದೇವನಹಳ್ಳಿ : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ​ ಆವರಣದಲ್ಲಿ ಕ್ಯಾಬ್​ಗಳ‌ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಹಲವು ಕಾರುಗಳು ಜಖಂ ಆಗಿವೆ.

ಕೆಂಪೇಗೌಡ ಏರ್​​​ಪೋರ್ಟ್​ ಸೆಕ್ಯುರಿಟಿ ಚೆಕಿಂಗ್ ಪಾಯಿಂಟ್ ಬಳಿ ಈ ಘಟನೆ ನಡೆದಿದ್ದು, ಮುಂದೆ ಹೋಗುತ್ತಿದ್ದ ಕಾರು ಬ್ರೇಕ್ ಹಾಕಿದ ಕಾರಣ ಹಿಂದಿನಿಂದ ಕಾರು ಡಿಕ್ಕಿಯಾಗಿದೆ. ಅಪಘಾತದ ರಬಸಕ್ಕೆ ಕಾರುಗಳ ಹಿಂಭಾಗ & ಮುಂಭಾಗ ನಜ್ಜುಗುಜ್ಜಾಗಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯು ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಪ್ರಿಯತಮೆ ನೋಡಲು ಹೋದ ಯುವಕ ದಿಢೀರ್ ಸಾವು – ಯುವತಿ ಕುಟುಂಬಸ್ಥರು ಕೊಲೆ ಮಾಡಿರುವ ಆರೋಪ!

Btv Kannada
Author: Btv Kannada

Read More