ಪ್ರಿಯತಮೆ ನೋಡಲು ಹೋದ ಯುವಕ ದಿಢೀರ್ ಸಾವು – ಯುವತಿ ಕುಟುಂಬಸ್ಥರು ಕೊಲೆ ಮಾಡಿರುವ ಆರೋಪ!

ಬೆಂಗಳೂರು : ಪ್ರೇಯಸಿ ನೋಡಲು ಬಂದ ಯುವಕನನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಿಯತಮೆ ನೋಡಲು ಹೋದ ಯುವಕ ದಿಢೀರ್ ಸಾವನ್ನಪ್ಪಿರುವ ಘಟನೆ ಹೆಗ್ಗನಹಳ್ಳಿ ಗಜಾನನ ನಗರದಲ್ಲಿ ನಡೆದಿದೆ. 29 ವರ್ಷದ ಅಬ್ಧುಲ್ ಹುಸೇನ್ ಸಾವನ್ನಪ್ಪಿರುವ ಯುವಕ.

ಮೃತ ಅಬ್ಧುಲ್ ಹುಸೇನ್ ಬ್ಯಾಡರಹಳ್ಳಿಯ ಚೇತನ ಸರ್ಕಲ್​ನಲ್ಲಿ ಸ್ಕ್ರಾಪ್ ಗೋಡಾನ್ ನಡೆಸುತ್ತಿದ್ದ. ಯುವತಿಯ ಮನೆ ಬಳಿಯಲ್ಲೇ ಸ್ಕಾಪ್ ಗೋಡಾನ್ ಇತ್ತು. ಯುವತಿಯ ತಂದೆ ಮೃತ ಅಬ್ದುಲ್ ಸಹೋದರನಿಗೆ ಕರೆ ಮಾಡಿ ಆತ ಅತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿ, ಗಜಾನನ ನಗರ ಬಳಿ ಬರುವಂತೆ ಹೇಳಿದರು. ಅಬ್ದುಲ್ ಸಹೋದರ ಸ್ಥಳಕ್ಕೆ ಬರ್ತಿದ್ದಂತೆ ಆಟೋದಲ್ಲಿ ಮೃತದೇಹ ಇಟ್ಟು ಯುವತಿ ಕುಟುಂಬಸ್ಥರು ಎಸ್ಕೇಪ್ ಆಗಿದ್ದಾರೆ.

ನಂತರ ಅಬ್ಧುಲ್ ಹುಸೇನ್ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಯುವತಿಯ ಕುಟುಂಬಸ್ಥರಿಂದ ಸಾವಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೇಲ್ನೋಟಕ್ಕೆ ಅಬ್ದುಲ್ ಹುಸೇನ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಇಂದು ಡಿಸಿಎಂ ನಿವಾಸದಲ್ಲಿ ಸಿಎಂಗೆ ಬ್ರೇಕ್ ಫಾಸ್ಟ್ – ಸಿದ್ದರಾಮಯ್ಯಗೆ ಇಷ್ಟವಾದ ನಾಟಿ ಕೋಳಿ ಸಾರು ರೆಡಿ ಮಾಡಿಸಿದ ಡಿಕೆಶಿ!

Btv Kannada
Author: Btv Kannada

Read More