ಮೈಸೂರಿನಲ್ಲಿ ಮತ್ತೊಂದು ಬರ್ಬರ ಕೊಲೆ – ರಾಡಿನಿಂದ ಹೊಡೆದು ವ್ಯಕ್ತಿಯ ಹತ್ಯೆ!

ಮೈಸೂರು : ಮೈಸೂರಿನಲ್ಲಿ ಮತ್ತೊಂದು ಅಮಾನವೀಯ ಕೊಲೆ ಪ್ರಕರಣ ನೆಡೆದಿದೆ, ಚಿಂದಿ ಆಯುವ ವೃತ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಗಾಯಿತ್ರಿ ಟಾಕೀಸ್ ಬಳಿ ಈ ಘಟನೆ ನಡೆದಿದೆ. ಸುಮಾರು 30 ವರ್ಷದ ಚಿಂದಿ ಆಯುವ ಅಲೆಮಾರಿ ವ್ಯಕ್ತಿ ಶಶಿ ಹತ್ಯೆಗೀಡಾಗಿದ್ದಾನೆ. ದುಷ್ಕರ್ಮಿಗಳು ಶಶಿಯ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಶಶಿಯೊಂದಿಗೆ ಚಿಂದಿ ಆಯುವ ವೃತ್ತಿ ಮಾಡುತ್ತಿದ್ದ ಸೀನ ಮತ್ತು ನರಸಿಂಹ ಎಂಬುವವರ ಮೇಲೆ ಕೊಲೆಯ ಶಂಕೆ ವ್ಯಕ್ತವಾಗಿದೆ. ಕುಡಿದ ಮತ್ತಿನಲ್ಲಿ ಸಹಪಾಠಿಗಳೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಕೆ.ಆರ್. ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಓರ್ವ ವ್ಯಕ್ತಿಯನ್ನು ಬಂಧಿಸಿದ್ದು, ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ : ವಾರಣಾಸಿಯ ಪ್ರಾಚೀನ ನಗರದಲ್ಲಿ ‘ದೈಜಿ’ ಶೂಟಿಂಗ್ – ಗುರು ದೇಶಪಾಂಡೆ ಪ್ರಮುಖ ಅತಿಥಿ ಪಾತ್ರದಲ್ಲಿ ನಟನೆ!

Btv Kannada
Author: Btv Kannada

Read More