ಬೆಂಗಳೂರು : ಲೈಂಗಿಕ ಸಮಸ್ಯೆ ಬಗೆಹರಿಸ್ತೀನಿ ಅಂತ ಟೆಕ್ಕಿಗೆ ವಂಚಿಸಿರುವ ಆರೋಪಿಯನ್ನು ಬೆಂಗಳೂರು ಜ್ಞಾನಭಾರತಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ವಿಜಯ್ ಗುರೂಜಿ ಗುಜರಾತ್ ಮೂಲದವನಾಗಿದ್ದು, ಈತನನ್ನು ಪೊಲೀಸರು ತೆಲಂಗಾಣ ಭಾಗದಲ್ಲಿ ಲಾಕ್ ಮಾಡಿದ್ದಾರೆ.
ಅಲೆಮಾರಿ ಜನಾಂಗದವನಾಗಿರುವ ವಿಜಯ್ ಗುರೂಜಿ ಬೆಂಗಳೂರಿನ ಗಲ್ಲಿಗಲ್ಲಿಯಲ್ಲಿ ಟೆಂಟ್ ಹಾಕ್ಕೊಂಡು ಜನರನ್ನು ಬುಟ್ಟಿಗೆ ಬೀಳಿಸಿಕೊಳ್ತಿದ್ದ. ಅದೇ ರೀತಿ ನಾಗರಬಾವಿ ಟೆಂಟಲ್ಲಿ ತೇಜಸ್ ಎಂಬ ಟೆಕ್ಕಿಗೂ ವಿಜಯ್ ಲೈಂಗಿಕ ಸಮಸ್ಯೆ ಬಗೆಹರಿಸ್ತೀನಿ ಎಂದಿದ್ದ. ದೇವರಾಜ್ ಬೂಟಿ ಎಂಬ ಪೌಡರ್ ನೀಡಿ ವಿಜಯ್ ಗುರೂಜಿ ಅರ್ಧ ಕೋಟಿ ಸುಲಿಗೆ ಮಾಡಿದ್ದ. ಪೌಡರ್ ತಗೊಂಡ ಒಂದೇ ತಿಂಗಳಿಗೆ ತೇಜಸ್ಗೆ ಕಿಡ್ನಿ ಇನ್ಫೆಕ್ಷನ್ ಕಾಣಿಸಿಕೊಂಡಿತ್ತು.

ಹಾಗಾಗಿ ತೇಜಸ್ನ ಹೆಂಡ್ತಿ ಕೂಡ ಗಂಡ ಬೇಡ್ವೇ ಬೇಡ ಅಂತ ಕೂತಿದ್ದಳು. ಇದೀಗ ಹೆಲ್ತು-ವೆಲ್ತು ಎರಡನ್ನೂ ಹಾಳು ಮಾಡ್ಕೊಂಡ ಟೆಕ್ಕಿ ತೇಜಸ್ ಕಣ್ಣೀರಲ್ಲಿ ಕೈತೊಳಿತಿದ್ದಾನೆ. ಇತ್ತ ಹೆಂಡ್ತಿ ಹೋದ್ಲು ಅತ್ತ ಆರೋಗ್ಯವೂ ಹೋಯ್ತು ಅಂತ ತೇಜಸ್ ನರಳ್ತಿದ್ದಾನೆ. ತೇಜಸ್ನ ಬಾಳನ್ನೇ ಕುಲಗೆಡಿಸಿರೋ ವಂಚಕ ಗುರೂಜಿ ಇದೀಗ ಅಂದರ್ ಆಗಿದ್ದಾನೆ. ಜ್ಞಾನಭಾರತಿ ಪೊಲೀಸರು ವಿಜಯ್ ಗುರೂಜಿಯ ಹಿನ್ನೆಲೆಯನ್ನು ಹುಡುಕಾಡ್ತಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ಟೆಂಪೋ ಪಲ್ಟಿ – ಐವರು ಕಾರ್ಮಿಕರು ದುರ್ಮರಣ!







