ಉಡುಪಿಯಲ್ಲಿ ಟೆಂಪೋ ಪಲ್ಟಿ – ಐವರು ಕಾರ್ಮಿಕರು ದುರ್ಮರಣ!

ಉಡುಪಿ : ಟೆಂಪೋ ಪಲ್ಟಿಯಾಗಿ ಐದು ಮಂದಿ ಸಾವನ್ನಪ್ಪಿದ್ದು, ಇನ್ನುಳಿದ ಏಳು ಮಂದಿ ಕಾರ್ಮಿಕರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತರು ಉತ್ತರ ಪ್ರದೇಶ ಮೂಲದ ಕಾರ್ಮಿಕರು.

ಟೆಂಪೋದಲ್ಲಿ ಒಟ್ಟು 12 ಮಂದಿ ಕಾರ್ಮಿಕರಿದ್ದರು. ಡೆಡ್ಲಿ ಆ್ಯಕ್ಸಿಡೆಂಟ್​ನಲ್ಲಿ ಐವರು ಮೃತಪಟ್ಟಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟೆಂಪೋ ಕಾಪುವಿನಿಂದ ಉಡುಪಿ ಕಡೆ ಸಾಗುತ್ತಿತ್ತು.

ಇವೆಂಟ್ ಒಂದಕ್ಕೆ ಸಾಮಗ್ರಿಗಳನ್ನು ಸಾಗಿಸಲಾಗುತ್ತಿತ್ತು. ವೇಗದಿಂದ ಸಾಗಿಬಂದ ಟೆಂಪೋ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿದ್ದು, ಅಪಘಾತದ ಭೀಕರತೆಗೆ ಕಾರ್ಮಿಕರು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದರು.

ಇದನ್ನೂ ಓದಿ : BJP ವಾರ್ಡ್ ಅಧ್ಯಕ್ಷನಿಂದ 50 ಲಕ್ಷ ವಂಚನೆ – FIR ದಾಖಲು, ಆರೋಪಿ ಪರಾರಿ!

Btv Kannada
Author: Btv Kannada

Read More