ಬೆಂಗಳೂರು : ಸಿಎಂ ವಿಶೇಷ ಅನುದಾನ ಕೊಡಿಸ್ತೇನೆಂದು ನಂಬಿಸಿ BJP ವಾರ್ಡ್ ಅಧ್ಯಕ್ಷ ಮಾಜಿ ಕಾರ್ಪೋರೇಟರ್ಗೆ 50 ಲಕ್ಷ ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಈ ಸಂಬಂಧ ಕೊಟ್ಟಿಗೆಪಾಳ್ಯ ವಾರ್ಡ್ನ ಬಿಜೆಪಿ ಅಧ್ಯಕ್ಷ ಹರೀಶ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ FIR ದಾಖಲಾಗಿದೆ.
ಮಾಜಿ ಕಾರ್ಪೋರೇಟರ್ ವೆಂಕಟೇಶ್ ಬಾಬು ಎಂಬುವವರಿಗೆ ಕೊಟ್ಟಿಗೆಪಾಳ್ಯ ವಾರ್ಡ್ನ ಬಿಜೆಪಿ ಅಧ್ಯಕ್ಷ ಹರೀಶ್ ವಂಚನೆ ಮಾಡಿದ್ದಾನೆ. ಮಾಜಿ ಕಾರ್ಪೋರೇಟರ್ ವೆಂಕಟೇಶ್ ಬಾಬುಗೆ ಬಿಜೆಪಿ ವಾರ್ಡ್ ಅಧ್ಯಕ್ಷ ಹರೀಶ್ ಪರಿಚಯವಾಗಿದ್ದ. ನಂತರ ಹರೀಶ್ ತನಗೆ ಪ್ರಿನ್ಸಿಪಲ್ ಸೆಕ್ರೆಟರಿ ಆಪ್ತ ಸಂದೀಪ್ ತುಂಬಾ ಪರಿಚಯ, MLA ಪತ್ರದ ಮೇಲೆ 5 ಕೋಟಿ ರೂ. ಸಿಎಂ ವಿಶೇಷ ಅನುದಾನ ಕೊಡಿಸುತ್ತೇನೆ. ಇದಕ್ಕೆ 10% ಕಮಿಷನ್ ನಂತೆ 50 ಲಕ್ಷ ರೂ. ಕೊಡಬೇಕಾಗುತ್ತೆ ಎಂದು ವೆಂಕಟೇಶ್ ಬಾಬು ಬಳಿ ಹೇಳಿದ್ದ.

ಬಳಿಕ ಸಂದೀಪ್ ಹಾಗು ಹರೀಶ್ ಒಟ್ಟು 50 ಲಕ್ಷ ರೂ. ಹಣ ಪಡೆದುಕೊಂಡಿದ್ದರು. ಸಂದೀಪ್ ಕರ್ನಾಟಕ ಸರ್ಕಾರಿ ವಾಹನದಲ್ಲಿ ಬಂದು ಹಣ ಪಡೆದುಕೊಂಡಿದ್ದ. ವೆಂಕಟೇಶ್ ಬಾಬುಗೆ ನಂಬಿಕೆ ಬರಿಸಲು 2-3 ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಪತ್ರಗಳನ್ನು ನೀಡಿದ್ದರು. ವೆಂಕಟೇಶ್ ಬಾಬು ಆತ ಕೊಟ್ಟಿರುವ ಪತ್ರವನ್ನ ಪಡೆದು ಇಲಾಖೆ ಕಚೇರಿಗೆ ಹೋಗಿದ್ದ. ಅಲ್ಲಿನ ಅಧಿಕಾರಿಗಳಿಗೆ ತೋರಿಸಿದಾಗ ಇದು ನಕಲಿ ದಾಖಲಾತಿ ಎಂದು ತಿಳಿದುಬಂದಿದೆ.

ಅನಂತರ ಹರೀಶ್ಗೆ ಕರೆ ಮಾಡಿದ್ರೆ ಸ್ವಿಚ್ ಆಫ್ ಆಗಿತ್ತು. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭ – ಈ ವಿಷಯಗಳ ಕುರಿತು ಚರ್ಚೆ ಸಾಧ್ಯತೆ!







