ಹಾಸನ : ನಟಿ ಆಶಿಕಾ ರಂಗನಾಥ್ ಸಂಬಂಧಿ ಪ್ರಿಯಕರನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಪಾಂಡುರಂಗ ನಗರದಲ್ಲಿ ನಡೆದಿದೆ. ಹಾಸನ ಮೂಲದ ಅಚಲ (22) ಆತ್ಮಹತ್ಯೆಗೆ ಶರಣಾದ ಯುವತಿ.

ನವೆಂಬರ್ 22ರಂದು ಯುವತಿ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಚಲ ತನ್ನ ದೂರದ ಸಂಬಂಧಿ ಮಯಾಂಕ್ ಎಂಬಾತನ ಜೊತೆ ಸ್ನೇಹ ಹೊಂದಿದ್ದಳು. ಇದೇ ವೇಳೆ ಪ್ರೀತಿಸುವುದಾಗಿ ನಂಬಿಸಿ ಸುತ್ತಾಡುತ್ತಿದ್ದ ಮಯಾಂಕ್ ಮದುವೆಗೆ ಮೊದಲೇ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದ. ಕಿರಾತಕ ಮಯಾಂಕ್ ಪ್ರೀತಿ ಹೆಸರಲ್ಲಿ ಅಚಲ ಜೊತೆ ದೈಹಿಕ ಸಂಬಂಧಕ್ಕೆ ಕಾಟ ಕೊಡ್ತಿದ್ದ. ಡ್ರಗ್ಸ್ ಅಡಿಕ್ಟ್ ಆಗಿದ್ದ ಮಯಾಂಕ್ ಒತ್ತಾಯಕ್ಕೆ ಒಪ್ಪದಿದ್ದಾಗ ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ನೀಡಿದ್ದ ಎಂಬ ಆರೋಪ ಕೇಳಿಬಂದಿದೆ.
ಪದೇ ಪದೇ ಫೋನ್ ಮಾಡಿ ಮಯಾಂಕ್ ಕಿರುಕುಳ ನೀಡಿದ್ದಕ್ಕೆ ಬೇಸತ್ತ ಅಚಲ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಚಲ ಪ್ರಿಯಕರ ಮಯಾಂಕ್ ವಿರುದ್ಧ ದೂರು ನೀಡಿದ್ರೂ ಪೊಲೀಸರು ಕ್ರಮ ಕೈಗೊಂಡಿಲ್ಲ, ಘಟನೆ ನಡೆದು 10 ದಿನ ಕಳೆದ್ರೂ ಆರೋಪಿಗಳ ಬಂಧನ ಆಗಿಲ್ಲ ಎಂದು ಯುವತಿ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ನಟಿ ಆಶಿಕಾ ರಂಗನಾಥ್ ಮಾವನ ಮಗಳೂ ಆಗಿರುವ ಅಚಲ ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ತಯಾರಿ ನಡೆಸಿದ್ದಳು. ಹೀಗಿರುವಾಗಲೇ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಮಯಾಂಕ್ ಹಾಗೂ ಆತನ ತಾಯಿ ಮೈನಾ ವಿರುದ್ಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗಳ ಸಾವಿಗೆ ಕಾರಣವಾದರನ್ನ ಕೂಡಲೆ ಬಂಧಿಸಿ ಎಂದು ಅಚಲ ಪೋಷಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು – ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!







