ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು – ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

ನೆಲಮಂಗಲ : ನೆಲಮಂಗಲದ ಟಿ.ಬಿ. ಸ್ಟಾಪ್ ಬಳಿಯ ಸುಭಾಷ್ ನಗರದಲ್ಲಿ ಹಾಡಹಗಲೇ ಭೀಕರ ಘಟನೆ ನಡೆದಿದೆ. ರಸ್ತೆಯಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಬಾಲಕ ದಕ್ಷಿತ್ ಮೇಲೆ ವೇಗವಾಗಿ ಬಂದ ಮಾರುತಿ ಎರ್ಟಿಗಾ KA-52 N-0460 ಕಾರು ಹರಿದಿದೆ.

ಬೇಜವಾಬ್ದಾರಿಯುತ ಚಾಲನೆಯಿಂದಾಗಿ ತಿರುವಿನಿಂದ ಬಂದ ಕಾರು ನೇರವಾಗಿ ಮಗುವಿನ ತಲೆ, ಮುಖ ಹಾಗೂ ಬೆನ್ನಿನ ಮೇಲೆ ಹರಿದಿದೆ. ಅದೃಷ್ಟವಶಾತ್, ದಕ್ಷಿತ್ ಸಾವಿನ ದವಡೆಯಿಂದ ಪವಾಡದ ರೀತಿ ಪಾರಾಗಿದ್ದಾನೆ.

ಮಗುವಿನ ಚೀರಾಟ ಕೇಳಿ ಸ್ಥಳೀಯರು ಕೂಡಲೇ ಹೊರ ಓಡಿಬಂದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಮೇಲೆ ಕಾರು ಹರಿಯುವ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕಾಮಗಾರಿ ಬಿಲ್ ವಿಳಂಬ – ಮನನೊಂದು ಗ್ರಾ.ಪಂ ಉಪಾಧ್ಯಕ್ಷ ಆತ್ಮಹತ್ಯೆಗೆ ಯತ್ನ!

Btv Kannada
Author: Btv Kannada

Read More